ನಾಲ್ಕು ಹಸುಗಳ ಕಳವು
ಮನೆಯ ಮುಂದೆ ಮಲಗಿದ್ದ ನಾಲ್ಕು ಹಸುಗಳ ಕಳ್ಳತನ ಮಾಡಿ ಕಳ್ಳರು ಪರಾರಿಯಾದ ಕಲಬುರಗಿ ನಗರದ ಶಿವಶಕ್ತಿ ನಗರದಲ್ಲಿ ನಡೆದಿದೆ. ಹೈಟೇಕ್ ಕಾರಿನಲ್ಲಿ ಬಂದು ತಿನ್ನಲು ತಿನಿಸು ನೀಡಿದ ಕಳ್ಳರು ದೇವಿಪುತ್ರ ರಾಠೋಡ್ ಎಂಬ ವ್ಯಕ್ತಿಗೆ ಸೇರಿದ ಹಸುಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಅನುಮಾನಗೋಡು ಸಿಸಿ ಟಿವಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿಂದೆಯೂ ಅನೇಕ ಸಲ ಶಿವಶಕ್ತಿ ನಗರದಲ್ಲಿ ಹಸುಗಳ ಕಳ್ಳತನವಾಗಿದೆ. ಆದರೆ ಇದುವರೆಗೂ ಪೆÇೀಲೀಸ್ ಇಲಾಖೆ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದೆ. ಚೌಕ್ ಪೆÇೀಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.