ಕೌಶಲ್ಯ ಪೂರ್ಣ ಶಿಕ್ಷಣವೂ ಜೀವನದಲ್ಲಿ ಮುಖ್ಯ

ಸುವರ್ಣ ಕಂಪ್ಯೂಟರ್ ಆಯೋಜಿಸಿದ್ದ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಗದಗ ಜಿಲ್ಲೆಯ ಹಾಗೂ ಸುವರ್ಣ ಕಂಪ್ಯೂಟರ್ ಎಜುಕೇಶನ್ ಸೆಂಟರ್ (ಕಿಯೊನಿಕ್ಸ ಪ್ರಾಂಚೈಸ್) ಗದಗ ಜಿಲ್ಲೆಯ ಇವರ ಸಹಯೋಗದಲ್ಲಿ 2019/20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯ ವಿಶೇಷ ಕೇಂದ್ರೀಯ ನೆರವಿನಡಿ ಉಚಿತ ತರಬೇತಿಯ ಪ್ರಮಾಣ ಪತ್ರ ವಿತರಣಾ ಸಮಾರಂಭ ಜರುಗಿತು. ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಗದಗ ಜಿಲ್ಲೆಯ ವ್ಯವಸ್ಥಾಪಕ ಆರ್ ಎಚ್ ನಾಯ್ಕರ್ ವಿಧ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವೊ ಅμÉ್ಟೀ ಕೌಶಲ್ಯ ಪೂರ್ಣ ಶಿಕ್ಷಣವೂ ಮುಖ್ಯ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ತಾಲೂಕಾ ಅಭಿವೃದ್ಧಿ ಅಧಿಕಾರಿಗಳು, ಡಾ|| ಬಿ ಆರ್ ಅಂಬೇಡ್ಕರ ಅಭಿವೃದ್ಧಿ ನಿಗಮ ನಿಯಮಿತ ಗದಗ ಶ್ರೀ ವೆಂಕಟೇಶ ದ್ವಾಸಲಕೇರಿ, ಸುವರ್ಣ ಫ್ಯಾಷನ್ ಟೆಕ್ನಾಲಜಿಸ್‍ನ ಪ್ರಾಂಶುಪಾಲರಾದ ಶ್ರೀಮತಿ ಪ್ರೀಯದರ್ಶಿನಿ ಅಂಗಡಿ ರವರು ಮತ್ತು ಇನ್‍ಸ್ಪೈರಾ ಟೆಕ್ನೋಲಿಜಿಸ್ ಕಂಪ್ಯೂಟರ್ ಸೆಂಟರ್ ನ ಮುಖ್ಯಸ್ಥರಾದ ಶ್ರೀ ಚಂದ್ರಶೇಖರ ಅಣ್ಣಿಗೇರಿ ಇದ್ದರು.