ಮೊದಲ ಬಾರಿಗೆ ಬೀದರ್‍ಗೆ ಆಗಮಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಗಡಿಜಿಲ್ಲೆ ಬೀದರ್ ಗೆ ಮೊದಲ ಬಾರಿಗೆ ಆಗಮಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಪುಷ್ಪಾರ್ಚಾನೆ ಮೂಲಕ ಸಾವಿರಾರು ಜನರು ಸ್ವಾಗತ ಕೋರಿದರು. ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಬೀದರ್ ನ ಭೂಮರೆಡ್ಡಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಸ್ವ ಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಕಾರ್ಯಕ್ರಮಗಳ ಸೌಲಭ್ಯ ವಿತರಣೆ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಕೇಂದ್ರ ಸಚಿವ ಭಗವಂತ್ ಖೂಬಾ, ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ,ಶಾಸಕರಾದ ಬಂಡೆಪ್ಪ ಖಾಶೆಂಪುರ್, ರಹೀಂಖಾನ್ ಮತ್ತು ವಿವಿಧ ಮಠದ ಮಠಾಧೀಶರು, ವಿವಿಧ ಗ್ರಾಮಗಳ ಸ್ವ ಸಹಾಯ ಸಂಘಟನೆಯ ಸಾವಿರರು ಮಹಿಳೆಯರು ಭಾಗಿಯಾಗಿದ್ದರು.