ಮೂವರು ಬೈಕ್ ಕಳ್ಳರು ಅರೆಸ್ಟ್, 36 ಬೈಕ್ ವಶಕ್ಕೆ
ವಿಜಯಪುರ ನಗರದ ಗಾಂಧಿ ಚೌಕ ಪೆÇಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ಜನ ಖತರ್ನಾಕ್ ಬೈಕ್ ಕಳ್ಳರನ್ನು ಬಂಧಿಸಿ ಅವರಿಂದ 36 ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ವಿಜಯಪುರ ನಗರದ ಗಾಂಧಿಚೌಕ್ ಪೆÇಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯಪುರ ಪೆÇೀಲಿಸ್ ವರಿμÁ್ಠಧಿಕಾರಿ ಎಚ್.ಡಿ. ಆನಂದಕುಮಾರ, ಒಟ್ಟು 36 ವಿವಿಧ ಕಂಪನಿಯ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ, ಬೈಕ್ ಕಳ್ಳತನ ನಡೆಸುತ್ತಿದ್ದ ತೌಸೀಫ್ ಮಹಿಬೂಬ ಕಲಾದಗಿ, ಸಮೀರ ಉಸ್ಮಾನಸಾಬ ಬಳಗಾನೂರ ಹಾಗೂ ಮಲ್ಲನಗೌಡ ಬಿರಾದಾರ ಎಂಬುವರನ್ನು ಬಂಧಿಸಿ ಬಂಧಿತರಿಂದ ಮೊತ್ತ 21,60,000 ಮೌಲ್ಯದ 36 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಡಿಷನಲ್ ಎಸ್ಪಿ ಡಾ.ರಾಮ ಅರಸಿದ್ದಿ , ಡಿವೈಎಸ್ಪಿ ಲಕ್ಷ್ಮೀನಾರಾಯಣ , ಸಿಪಿಐ ರವೀಂದ್ರ ನಾಯ್ಕೋಡಿ , ಪಿ.ಎಸ್.ಐ. ಆರೀಫ್ ಮುಶಾಪುರೆ ಮತ್ತಿತರ ಪೆÇಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.