ಶ್ರೀನಿವಾಸ ಮಾನೆ ಗೆಲುವು, ಮುಗಿಲುಮುಟ್ಟಿದ ಸಂಭ್ರಮ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲಿ ಬಿಜೆಪಿ ಮಣಿಸಿದ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಪಟ್ಟಣದಲ್ಲಿ ಉಪ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದ ಶ್ರೀನಿವಾಸ ಮಾನೆ ಗೆಲುವು ಹಿನ್ನೆಲೆ ಸಾಧಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು ಪಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಸೋಮಣ್ಣ ಬೇವಿನಮರದ, ಮುಖಂಡರಾದ ಶ್ರೀಕಾಂತ ದುಂಡಿಗೌಡರ, ಸುಧೀರ ಅಂಗಡಿ, ಮಂಜುನಾಥ ಮಣ್ಣಣ್ಣವರ, ಸಿ.ಎಸ್ ಪಾಟೀಲ, ಶ್ರೀಕಾಂತ ಪೂಜಾರ, ಪ್ರಕಾಶ ಹಾದಿಮನಿ, ಹೇಮರೆಡ್ಡಿ ನಡುವಿಮನಿ, ಕೇದಾರಪ್ಪ ಬಗಾಡೆ, ಹಲವರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.