94000 ರೂಗಳನ್ನು ಗುಳುಂ ಮಾಡಿದ ಪಿಡಿಓ

ರಟ್ಟೀಹಳ್ಳಿ ತಾಲ್ಲೂಕಿನ ಹಿರೇಮೊರಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ ನರೇಗಾ ಯೋಜನೆ ಅಡಿಯಲ್ಲಿ 94000 ರೂಗಳನ್ನು ಗುಳುಂ ಮಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಸ್ಥಳೀಯರು ಆಕ್ರೋಶ ವ್ದಯಕ್ತಪಡಿಸಿ ಪ್ರತಿಭಟನೆ ಕೈಗೊಂಡರು. ಸ್ಥಳೀಯರ ಆಕ್ರೋಶಕ್ಕೆ ಬೆದರಿದ ಪಿಡಿಓ ತಕ್ಷಣಕ್ಕೆ ಟ್ರ್ಯಾಕ್ಟರ್ ಮೂಲಕ ಮಣ್ಣು ಹೇರಿಸಲು ಪ್ರಯತ್ನಿಸಿದರು. ಆಗ ಟ್ರ್ಯಾಕ್ಟರ್ ಅನ್ನು ಗ್ರಾಮಸ್ಥರು ತಡೆದರು. ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತ್ ಇ. ಓ ಪರಿಶೀಲನೆ ನಡೆಸಿದರು. ನಂತರ 9 ಲೈವ್ ನ್ಯೂಸ್‍ನೊಂದಿಗೆ ಮಾತನಾಡಿದ ಇ. ಓ, ಯಾವುದೇ ಕಾಮಗಾರಿ ನಡೆದಿಲ್ಲ, ಕಾಮಗಾರಿ ನಡೆಯದೆ ಬಿಲ್ ತೆಗೆದಿರುವುದು ತಪ್ಪು, ಪಿಡಿಓ ಮೇಲೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು