ಸಂಸದೆ ಸುಮಲತಾ ಸಹೋದರಿಗೆ ವಂಚನೆ: ಬ್ಯಾಂಕ್ ಉದ್ಯೋಗಿ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು, ಡಿ. 02: ಸಂಸದೆ ಸುಮಲತಾ ಅವರ ಸಹೋದರಿಗೆ ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಚ್‌ಡಿಎಫ್ ಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ವಿಶಾಲಾಕ್ಷಿ ಎಂಬವರು ವಂಚನೆ ಮಾಡಿದ್ದು, ಇವರ ವಿರುದ್ಧ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
60 ಲಕ್ಷ ರೂ. ಹೂಡಿಕೆ ಮಾಡಿಸಿ ವಿಶಾಲಾಕ್ಷಿ ಭಟ್ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 60 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿರುವ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿರುವಾಗಲೇ ರೇಣುಕಾ ನಿವಾಸಕ್ಕೆ ಬಂದು ಖಾಲಿ ಪೇಪರ್ ಗೆ ಸಹಿ ಹಾಕುವಂತೆ ವಿಶಾಲಾಕ್ಷಿಭಟ್ ಧಮ್ಕಿ ಹಾಕಿದ್ದಾರೆ.
ಹಣ ವಂಚನೆ ಮಾಡಿದ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೂ ವಿಶಾಲಾಕ್ಷಿಭಟ್ ಮನೆಗೆ ಬಂದು ಖಾಲಿ ಪೇಪರ್ ಗೆ ಸಹಿ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಆಗಿದ್ದ ವಿಶಾಲಾಕ್ಷಿ ಭಟ್ ಹೂಡಿಕೆ ಮಾಡಿಸಿ ಮೋಸ ಮಾಡಿದ ಸಂಬಂಧ ನಾನು ಕೊಟ್ಟಿರುವ ದೂರು ತನಿಖೆ ಆಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ.
ಇದೀಗ ಖಾಲಿ ಪೇಪರ್‌ಗೆ ಸಹಿ ಹಾಕುವಂತೆ ಧಮ್ಕಿ ಹಾಕುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅವರ ಸಹೋದರಿ ರೇಣುಕಾ ಅವರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ವಿಶಾಲಾಕ್ಷಿಭಟ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.