ಅಫ್ಘಾನಿಸ್ತಾನದ ಹೆರಾತ್ನಲ್ಲಿ ಕಾರ್ಬನ್ ಮಾನಾಕ್ಸೈಡ್ ವಿಷಕ್ಕೆ 140 ಮಂದಿ ಆಸ್ಪತ್ರೆಗೆ ದಾಖಲು

ಅಫ್ಘಾನಿಸ್ತಾನ: ಹೆರಾತ್ ಪ್ರಾಂತ್ಯದಲ್ಲಿ ಕಾರ್ಬನ್ ಮಾನಾಕ್ಸೈಡ್ ವಿಷಕಾರಕ ಅಂಶ ಹೆಚ್ಚಳಕ್ಕೆ 140 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಫ್ಘಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದಲ್ಲಿ ಉರುವಲು ಮತ್ತು ಇತರ ಮೂಲಭೂತ ಸೌಕರ್ಯಗಳ ಬೆಲೆ ತುಂಬಾ ಹೆಚ್ಚಿರುವುದರಿಂದ ಭಾರೀ ಚಳಿಗಾಲದ ನಡುವೆ ತಮ್ಮ ಮನೆಗಳನ್ನು ಬೆಚ್ಚಗಾಗಲು ಗ್ಯಾಸ್ ಅನ್ನು ಬಳಸುತ್ತಿದ್ದಾರೆ ಎಂದು ಹೆರಾತ್ ನಿವಾಸಿಗಳು ಹೇಳಿದ್ದಾರೆ.
ಚಿಕಿತ್ಸೆಗಾಗಿ ಆಸ್ಪತ್ರೆ ಕರೆದಂತ ಹೆರಾತ್ ನಿವಾಸಿ ಅಬ್ದುಲ್ ಖಾದಿರ್ ಮಾತನಾಡಿ, ನನ್ನ ಕುಟುಂಬವು ಗ್ಯಾಸ್ ಆನ್ ಮಾಡಿದೆ. ನಾನು ಮನೆಗೆ ಐದು ನಿಮಿಷ ತಡವಾಗಿ ಬಂದಿದ್ದರೆ ನನ್ನ ಕುಟುಂಬದ 21 ಜನರನ್ನು ಕಳೆದುಕೊಳ್ಳುತ್ತಿದ್ದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.,
'ಕಳೆದ 24 ಗಂಟೆಗಳಲ್ಲಿ, 130 ರಿಂದ 140 ರೋಗಿಗಳನ್ನು ಆಸ್ಪತ್ರೆಯ ತುರ್ತು ವಾರ್ಡ್ಗೆ ಕರೆತರಲಾಗಿದೆ' ಎಂದು ಆಸ್ಪತ್ರೆಯ ಮುಖ್ಯಸ್ಥ ಅಹ್ಮದ್ ಫರ್ಹಾದ್ ಅಫ್ಜಲಿ ಹೇಳಿದ್ದಾರೆ.
ಈಗಾಗಲೇ ಬಡತನ, ಆಹಾರ ಮತ್ತು ಇಂಧನದ ಕೊರತೆಯಿಂದ ಬಳಲುತ್ತಿರುವ ಜನರ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರ ನಡುವೆ ತಾಪಮಾನದ ದಿಢೀರ್ ಕುಸಿತವು ಚಳಿಯಿಂದಾಗಿ 4 ಪ್ರಾಂತ್ಯಗಳಲ್ಲಿ 16 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಟಿಒಎಲ್‌ಒನ್ಯೂಸ್ ವರದಿ ಮಾಡಿದೆ.
ಇಲ್ಲಿಯವರೆಗೆ, ನನ್ನ ಕುಟುಂಬದ ಇಬ್ಬರು ಸದಸ್ಯರು ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಸಾವನ್ನಪ್ಪಿದ್ದಾರೆ' ಎಂದು ಹೆರಾತ್ ನಿವಾಸಿ ಶಕಿಲಾ ಹೇಳಿದರು. ಕೆಲವು ಕುಟುಂಬಗಳು ತಮ್ಮ ಮನೆ ಬೆಚ್ಚಗಿರಿಸಲು ಕಲ್ಲಿದ್ದಲನ್ನು ಬಳಸುವುದರಿಂದ ಕಾರ್ಬನ್ ಮಾನಾಕ್ಸೈಡ್ ವಿಷವು ಹೆಚ್ಚಾಗುವ ಸಾಧ್ಯತೆಯಿದೆ.