ಧಾರವಾಡ ಜಿಲ್ಲಾ ಅಣ್ಣಿಗೇರಿಗೆ ಇಂದು ಜವಳಿ, ಕೈಮಗ್ಗ, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿದರು.

ಧಾರವಾಡ ಜಿಲ್ಲಾ ಅಣ್ಣಿಗೇರಿಗೆ ಇಂದು ಜವಳಿ, ಕೈಮಗ್ಗ, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿದರು. ತಹಶೀಲ್ದಾರ ಕಛೇರಿಗೆ ಭೇಟಿ ನೀಡಿದ ಅವರು , ತಾಲ್ಲೂಕಿನ ಮಣಕವಾಡ ಗ್ರಾಮದ ರುದ್ರಭೂಮಿಗಾಗಿ 2 ಎಕರೆ ಜಾಗಕ್ಕೆ 15,46,664 ರೂ ಗಳು ಹಾಗೂ ಕಿತ್ತೂರು ಗ್ರಾಮದ ರುದ್ರಭೂಮಿ 1.20 ಗುಂಟೆ ಜಾಗಕ್ಕಾಗಿ 12,68,292 ರೂ ಗಳ ಹಣ ಬಿಡುಗಡೆ ಮಾಡಿದರು. ಇತ್ತೀಚೆಗೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ 32 ಮನೆಗಳಿಗೆ ತಲಾ 10,000 ರೂ ಗಳ ಚೆಕ್ ವಿತರಣೆ ಮಾಡಿದರು. ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳ ರುದ್ರಭೂಮಿಗೆ ಹಣ ಮಂಜೂರು ಮಾಡುವುದರ ಜೊತೆಗೆ ಗ್ರಾಮ ಪಂಚಾಯತ ಸಹಯೋಗದೊಂದಿಗೆ ಸಕಲ ಅಭಿವೃದ್ಧಿ ಕೈಗೊಳ್ಳುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಮನೆಗಳಿಲ್ಲದ ಪ್ರತಿಯೊಬ್ಬರಿಗೂ ನಿವೇಶನಗಳನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.ಅಲ್ಲದೆ ಪ್ರಧಾನ ಮಂತ್ರಿ ಮೋದಿಯವರ ಸ್ವಚ್ಛ ಭಾರತ ಅಭಿಯಾನದಡಿ ನಗರದ ಶಾಲೆಗಳಿಗೆ ಶಿಕ್ಷಣ ಅಧಿಕಾರಿಗಳ ಸಮ್ಮುಖದಲ್ಲಿ ಕಸದ ವಿಲೇವಾರಿ ಡಬ್ಬಿಗಳನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಅಮಾಸೆ, ಪುರಸಭೆ ಮುಖ್ಯಾಧಿಕಾರಿ ಕೆ ಎಫ್ ಕಟಗಿ, ಬಿಜೆಪಿ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ರಾದ ಷಣ್ಮುಖ ಗುರಿಕಾರ, ಮುಖಂಡರಾದ ಶಿವಯೋಗಿ ಸುರಕೋಡ, ಎಸ್ ಬಿ ದಾನಪ್ಪಗೌಡ್ರ, ಶಿವಾನಂದ ಹೊಸಳ್ಳಿ, ಮಹಾಂತೇಶ ಕರೆನ್ನವರ,ಪ್ರವೀಣ ಹಡಪದ, ವಿಜಯಕುಮಾರ ಕಂಬಿಮಠ,ಶಿವಣ್ಣ ಹಾಳದೋಟರ, ಸಿ ಜಿ ನಾವಳ್ಳಿ, ಷಣ್ಮುಖ ತೋಟಕಾವು, ಯೋಗೇಶ ವಡ್ಡರ, ಜಗದೀಶ ಅಬ್ಬಿಗೇರಿಮಠ ಇನ್ನಿತರರು ಉಪಸ್ಥಿತರಿದ್ದರು.