ದಾವಣಗೆರೆ: ಪುನೀತ್ ರಾಜ್ಕುಮಾರ್ಗೆ ಸಂಗೀತದ ಮೂಲಕ ನುಡಿನಮನ ಸಲ್ಲಿಸಿದ ರಾಜೇಶ್ ಕೃಷ್ಣನ್
ದಾವಣಗೆರೆ: ಪುನೀತ್ ರಾಜ್ಕುಮಾರ್ಗೆ (Puneeth Rajkumar) ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಂದಿನ ದಿನಗಳಲ್ಲಿ ಅವಳಿ ತಾಲೂಕಿನಲ್ಲಿ ಐದು ಸಾವಿರ ಜನರು ನೇತ್ರಾದಾನ ಮಾಡಿಸಲು ಸಚಿವ ರೇಣುಕಾಚಾರ್ಯರು ಸಂಕಲ್ಪ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ನೇತ್ರದಾನದಿಂದ ಪ್ರೇರಣೆಗೊಂಡ ರೇಣುಕಾಚಾರ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯರ ಇಡೀ ಕುಟುಂಬ ನೇತ್ರದಾನ ಮಾಡಲು ನಿರ್ಧಾರ
ಈಗಾಗಲೇ ಮರಣೋತ್ತರವಾಗಿ ನೇತ್ರದಾನ ಮಾಡಲು ರೇಣುಕಾಚಾರ್ಯ ಕುಟುಂಬ ಶಿವಮೊಗ್ಗ ಮೂಲದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಶಾಸಕರ ಅವಿಭಕ್ತ ಕುಟುಂಬದಲ್ಲಿ ಒಟ್ಟು 62 ಜನರಿದ್ದಾರೆ. ಈ 62 ಮಂದಿ ನೇತ್ರದಾನ ಮಾಡಲು ನೋಂದಣಿ ಮಾಡಿಸಿದ್ದಾರೆ ಎಂದು ರೇಣುಕಾರ್ಚಾರ್ಯರ ಪತ್ನಿ ಸುಮಾ ತಿಳಿಸಿದ್ದಾರೆ. ಹೊನ್ನಾಳಿಯಲ್ಲಿ ನಟ ಪುನೀತ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನೇತ್ರದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ವಿಶೇಷ ನಮನ ಸಲ್ಲಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಹಾಗೂ ಟೆನ್ನಿಸ್ ಕೃಷ್ಣ ಭಾಗಿಯಾಗಿ ಪುನೀತ್ ಜೊತೆ ಕೆಲಸ ಮಾಡಿದ ನೆನಪುಗಳನ್ನು ಮೆಲುಕು ಹಾಕಿದರು. ವೇದಿಕೆ ಮೇಲೆ ಶಾಸಕ ರೇಣುಕಾಚಾರ್ಯ, ಪತ್ನಿ ಸುಮಾ, ಪುತ್ರ ಚಂದನ, ಪುತ್ರಿ ಚೇತನಾ ನೇತ್ರದಾನಕ್ಕೆ ಸಹಿ ಹಾಕಿದರು. ಇದೇ ವೇಳೆ ಗಾಯಕ ರಾಜೇಶ್ ಕೃಷ್ಣನ್ ಸೇರಿದಂತೆ ನೂರಾರು ಜನ ನೇತ್ರದಾನದ ಪತ್ರಕ್ಕೆ ಸಹಿ ಹಾಕಿದರು.