ವಿನಯ್ ಕುಲಕರ್ಣಿಗೆ ಬಿಗ್ ಶಾಕ್, ವಿನಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಹೈಕೋರ್ಟ್ ವಜಾಗೊಳಿಸಿದೆ. ಧಾರವಾಡ ಜಿಲ್ಲಾ ಪಂಚಾಯತ್ ಪಂಚಾಯತ್ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಚಾರ್ಜಶೀಟ್ ರದ್ದುಗೊಳುಸಿವಂತೆ ಕೋರಿದ್ದ ಅರ್ಜಿಯನ್ನು ಬೆಂಗಳೂರು ವಜಾಗೊಳಿಸಿದೆ. ಈ ಹಿಂದೆ ವಿನಯ್ ಕುಲಕರ್ಣಿ ಅವರು ಜಾಮೀನು ಮಂಜೂರು ಮಾಡುವುದು ಹಾಗೂ ಚಾರ್ಜ್ಶೀಟ್ ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಹ ಅರ್ಜಿ ಸಲ್ಲಿಸಿದ್ರು. ವಿನಯಗೆ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂ, ಚಾರ್ಜ್ಶೀಟ್ ರದ್ದುಪಡಿಸುವ ಕುರಿತು ಹೈಕೋರ್ಟ್ ದ್ವಿಸದಸ್ಯ ಪೀಠ ನಿರ್ಧಾರ ಕೈಗೊಳ್ಳಬೇಕು ಎಂದು ವಿನಯ್ ಅವರ ಅರ್ಜಿಯನ್ನು ಹೈಕೋರ್ಟ್ಗೆ ವರ್ಗಾವಣೆ ಮಾಡಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ವಿನಯ ಅವರ ಅರ್ಜಿಯನ್ನೇ ವಜಾಗೊಳಿಸಿ ಆದೇಶ ಹೊರಡಿಸಿದೆ. ವಿನಯ ಅವರು ಯೋಗೀಶಗೌಡರ ಇಡೀ ಪ್ರಕರಣದ ಚಾರ್ಜ್ಶೀಟ್ನ್ನೇ ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ಕುಲಕರ್ಣಿ ಅವರ ಅರ್ಜಿ ಇದೀಗ ತಿರಸ್ಕಾರಗೊಂಡಿದ್ದು, ಕೊಲೆ ಪ್ರಕರಣ ವಿನಯ್ ಅವರಿಗೆ ಮತ್ತಷ್ಟು ಮುಳುವಾಗುವ ಶಂಕೆ ವ್ತಕ್ತವಾಗಿದೆ.