ಧಾರವಾಡ: ಕೊರೊನಾ ಮಹಾಮಾರಿ ಹಿನ್ನೆಲೆ ಎಲ್ಲ ವರ್ಗದವರ ಜೀವನ ಅಸ್ತವ್ಯಸ್ತವಾಗಿದೆ ಅದರಲ್ಲಿಯೂ ಕಡು ಬಡವರ, ನಿರ್ಗತಿಕರ ಜೀವನ ಹೇಳತೀರದು. ಇಂತಹ ಸಂದರ್ಭದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಹೀಗಿರುವಾಗ ಇಲ್ಲೊಂದು ಕುಟುಂಬ ಲಾಕ್‌ಡೌನ್ ಆದ ಪರಿಣಾಮ ತಮ್ಮ ಮನೆಯಲ್ಲಿ ಊಟ ತಯಾರಿಸಿ ಪ್ರತಿ ದಿನವೂ ಬೀದಿ ಬದಿ ಇದ್ದವರಿಗೆ ಆಹಾರದ ಪೊಟ್ಟಣದ ವ್ಯವಸ್ಥೆ ಮಾಡಿದ್ದಾರೆ.
ಉಪ್ಪಿನ ಬೆಟಗೇರಿ ನಿವಾಸಿಯಾದ ಕರಬಸಪ್ಪ ಓಂಕಾರಿ, ನೀಲವ್ವ ಓಂಕಾರಿ, ಚೈತ್ರಾ ಓಂಕಾರಿ, ಹಾಗೂ ಅವರ ಮೂರು ವರ್ಷದ ಮೊಮ್ಮಗ ವಿನಾಯಕ ಓಂಕಾರಿ ಕೂಡಾ ಈ ಆಹಾರ ಪೊಟ್ಟಣದ ಪ್ಯಾಕಿಂಗ್ ಮಾಡುತ್ತಿದ್ದಾನೆ. ಹಿರಿಯರ ಸಂಸ್ಕçತಿಯAತೆ ಮಗುವು ಕೂಡಾ ಅನುಕರಿಸುತ್ತಿದೆ. ಆಹಾರ ಪೊಟ್ಟಣ ಮಾಡಿದ ನಂತರ ಮೂರು ವರ್ಷದ ವಿನಾಯಕನು ತಂದೆಯೊಡನೆ ನಾನು ಆಹಾರ ಪೊಟ್ಟಣವನ್ನು ಕೊಡಲು ಬರುತ್ತೇನೆಂದು ಹಠ ಮಾಡುತ್ತಿದ್ದು, ಕೊರೊನಾ ಕಾಲದಲ್ಲಿ ಮನೆಯಲ್ಲಿ ಇರಲು ಬುದ್ದಿ ಮಾತು ಹೇಳುತ್ತಿದ್ದಾರೆ. ಒಟ್ಟಾರೆ
ಅವರ ಈ ಕಾರ್ಯ ಕೊರೊನಾ ಇಂತಹ ಸಮಯದಲ್ಲಿ ಬಹಳಷ್ಟು ಬೀದಿ ಬದಿ ನಿರ್ಗತಿಕರಿಗೆ ಹಾಗೂ ಆಹಾರದ ಅವಶ್ಯಕತೆ ಇರುವವರಿಗೆ ದೇವರೇ ಬಂದು ಸಹಾಯ ಮಾಡಿದಂತಾಗಿದೆ ಎಂದು ಹಸಿವಿನಿಂದ ಬಳಲಿದ ಶಿವಪ್ಪ ಹೇಳಿಕೊಂಡನು. ಉಪ್ಪಿನ ಬೆಟಗೇರಿ ಗ್ರಾಮದಲ್ಲಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅನ್ನ ಧಾನದ ಪುಣ್ಯ ಅವರಿಗೆ ಲಭಿಸುವಂತಾಗಲಿ ಎಂದು ಹಾರೈಸೋಣ.