ಅಕ್ರಮ 'ಪಿಎಸ್‌ಐ' ನೇಮಕಾತಿ ಪ್ರಕರಣ : ಬ್ಯಾಡರಹಳ್ಳಿ 'PSI' ಹರೀಶ್ ಜಾಮೀನು ಅರ್ಜಿ ವಜಾ

ಬೆಂಗಳೂರು : ಅಕ್ರಮ ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಬ್ಯಾಡರಹಳ್ಳಿ ಪಿಎಸ್‌ಐ ಹರೀಶ್ ಕೆ ಅವರ ಜಾಮೀನು ಅರ್ಜಿ ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಪೊಲೀಸ್ ಅಧಿಕಾರಿಯಾಗಿ ಅಕ್ರಮದಲ್ಲಿ ಭಾಗಿಯಾಗಿದ್ದ ಹರೀಶ್ ಮಾಗಡಿ ತಾಲೂಕಿನವರಾಗಿದ್ದು, 2019 ರಲ್ಲಿ ನಡೆಸಿದ್ದ 545 ಪಿಎಸ್‌ಐ ಹುದ್ದೆಗಳ ಅಕ್ರಮ ಪ್ರಕರಣದಲ್ಲಿ ಬಂಧಿತನಾದ ಅಭ್ಯರ್ಥಿಯೊಬ್ಬರಿಗೆ ಸಹಾಯ ಮಾಡಿದ್ದರು ಎಂದು ಆರೋಪಿಸಲಾಗಿತ್ತು.