ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧೀಕ್ಷಕ
ಗದಗ
ಗದಗ ಡಿಹೆಚ್ ಒ ಕಚೇರಿ ಮೇಲೆ ಡಿಎಸ್ ಪಿ ಎಮ್ ವಿ ಮಲ್ಲಾಪುರ ನೇತೃತ್ವದಲ್ಲಿ ಎಸಿಬಿ ದಾಳಿ ನಡೆಸಿ ಗುತ್ತಿಗೆ ಆಧಾರದ ಕೆಲಸದಲ್ಲಿ ಮುಂದುವರೆಸಲು ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಅಧೀಕ್ಷಕನಾಗಿದ್ದ ಶಿವಾನಂದ ಶಿಂಡೋಗಿ 19 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಬಂಧಿತ ಆರೋಪಿ ತಾಲೂಕು ಆಸ್ಪತ್ರೆಯಿಂದ ಒಒಡಿ ಮೇಲೆ ಡಿಹೆಚ್‍ಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನು. ಎಸಿಬಿ ಸಿಬ್ಬಂದಿಯಾದ ಎಮ್ ಎಮ್ ಐಯ್ಯನಗೌಡರ್, ಆರ್ ಹೆಚ್ ಹೆಬಸೂರ, ಶರೀಫ್ ಮುಲ್ಲಾ, ಮಂಜು ಮುಳಗುಂದ ವೀರೇಶ್ ಬೀಸನಳ್ಳಿ, ಎಮ್ ಎಸ್ತಾಯಣ್ಣವರ್, ವೀರಣ್ಣ ಜಾಲಿಹಾಳ, ವೀರೇಶ್ ಜೋಳದ, ತಾರಪ್ಪ ಭಾಗಿಯಾಗಿದ್ದರು.