ಕೋಲಾರದಲ್ಲಿ ಸಿದ್ದರಾಮಯ್ಯಗೆ ತಲೆನೋವಾದ ಬಣ ರಾಜಕೀಯ, ಅಹಿಂದ ಮತಗಳ ಕ್ರೋಢೀಕರಣ

ಕೋಲಾರದಲ್ಲಿ ಸಿದ್ದರಾಮಯ್ಯಗೆ ತಲೆನೋವಾದ ಬಣ ರಾಜಕೀಯ, ಅಹಿಂದ ಮತಗಳ ಕ್ರೋಢೀಕರಣ
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿ ಗೆಲವಿನ ನಿರೀಕ್ಷಯಲ್ಲಿದ್ದರೂ ಸ್ಥಳಿಯ ಬಣ ರಾಜಕೀಯ ಮತ್ತು ದಲಿತ ಹಾಗೂ ಕುರುಬ ಸಮಾಜದ ಬಂಡಾಯ ಮಾತ್ರ ಸಿದ್ದರಾಮಯ್ಯ ತೆಲೆನೋವಾಗಿ ಪರಿಣಮಿಸಿದೆ.

ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿ ಗೆಲವಿನ ನಿರೀಕ್ಷಯಲ್ಲಿದ್ದರೂ ಸ್ಥಳಿಯ ಬಣ ರಾಜಕೀಯ ಮತ್ತು ದಲಿತ ಹಾಗೂ ಕುರುಬ ಸಮಾಜದ ಬಂಡಾಯ ಮಾತ್ರ ಸಿದ್ದರಾಮಯ್ಯ ತೆಲೆನೋವಾಗಿ ಪರಿಣಮಿಸಿದೆ.

ಈ ಹಿನ್ನೆಲೆ ಸ್ಥಳೀಯ ರಾಜಕೀಯವೇನು, ಜಾತಿ ಲೆಕ್ಕಾಚಾರವೇನು ಇಲ್ಲಿದೆ ಮಾಹಿತಿ

  1. ವಿಪಕ್ಷ ನಾಯಕ ಸಿದ್ದರಾಮಯ್ಯ ಪಾಲಿಗೆ ಕೋಲಾರ ಗೆಲುವಿನ ಹಾರ ಆಗುತ್ತಾ..? ಕಂಟಕ ಆಗುತ್ತಾ?-ಕೋಲಾರಕ್ಷೇತ್ರ ಸಿದ್ದರಾಮಯ್ಯಗೆ ಗೆಲುವಿನ ಹಾರ ಆಗುತ್ತೆ ಎಂದು ಸಿದ್ದರಾಮಯ್ಯ ಅಳೆದು ತೂಗಿ ಕೋಲಾರ ಕ್ಷೇತ್ರದಲ್ಲಿ ತನಗೆ ನಿರಾಯಾಸದ ಗೆಲುವು ಸಿಗುತ್ತದೆ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ದಿನದಿಂದ ದಿನಕ್ಕೆ ಸಿದ್ದರಾಮಯ್ಯ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಿದೆ. ಸಿದ್ದರಾಮಯ್ಯ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ ನಂತರ, ಅಹಿಂದ ಮತಗಳು ವಿಭಜನೆಯಾಗುವ ಲಕ್ಷಣ ಗೋಚರಿಸುತ್ತಿದೆ. ಮೊದಲು ಕುರುಬ ಸಮುದಾಯ, ನಂತರ ದಲಿತ ಸಮುದಾಯ ಹಾಗೂ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
  2. ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಕಂಟಕವಾಗುವ ಲಕ್ಷಣಗಳು ಗೋಚರವಾಗುತ್ತಿವೆ.-ಕುರುಬ ಸಮುದಾಯದ ಕೆಲವರು ಸಿದ್ದರಾಮಯ್ಯ ವಿರುದ್ದವಾಗಿದ್ದರೇ, ದಲಿತ ಸಮುದಾಯದ ಒಂದು ಗುಂಪು ಹಾಗೂ ಅಲ್ಪಸಂಖ್ಯಾತರ ಒಂದು ಗುಂಪು ಸಿದ್ದರಾಮಯ್ಯ ಹಾಗೂ ಕಾಂಗ್ರೇಸ್​ ವಿರುದ್ದ ತಿರುಗಿ ಬಿದ್ದಿವೆ. ಜೊತೆಗೆ ಕೋಲಾರ ಜಿಲ್ಲಾ ಕಾಂಗ್ರೇಸ್​ನಲ್ಲಿ ಬಣ ರಾಜಕೀಯ ಶಮನವಾಗುವ ಲಕ್ಷಣ ಕಂಡು ಬರುತ್ತಿಲ್ಲ. ವೇದಿಕೆ ಹಾಗೂ ಹೊರಗೆ ಎಷ್ಟೇ ಗುಂಪುಗಾರಿಕೆ ಶಮನವಾಗಿದೆ ಎಂದು ಹೇಳಿದರು ಒಳಗೆ ಬಣ ರಾಜಕೀಯ ಬೇಯುತ್ತಲೇ ಇದೆ.
  3. ಕೋಲಾರದಲ್ಲಿ ಘೋಷಣೆ ಮಾಡಿದ ನಂತರ ಪ್ರಜಾಧ್ವನಿಯ ಮೊದಲ ಸಮಾವೇಶ.. ನಿರೀಕ್ಷಿತ ಮಟ್ಟದಲ್ಲಿ ಜನ ಸೇರಿದ್ರಾ?-ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿದ ನಂತರ ಪ್ರಜಾಧ್ವನಿ ಸಮಾವೇಶದ ಮೂಲಕ ಸಿದ್ದರಾಮಯ್ಯರ ಸ್ವಪಕ್ಷೀಯರು ಸೇರಿದಂತೆ, ವಿರೋಧ ಪಕ್ಷಗಳಿಗೂ ಟಕ್ಕರ್​ ಕೊಡುವ ಲೆಕ್ಕಾಚಾರ ಹಾಕಿದ್ದರು. ಅದರಂತೆ ಆಯೋಜಕರು ಜಿಲ್ಲೆಯಾಧ್ಯಂತ ಸುಮಾರು 40 ರಿಂದ 50 ಸಾವಿರ ಜನರು ಸೇರುತ್ತಾರೆ ಎಂದು ಹೇಳಿದರು. ಆದರೆ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನ ಸೇರಲಿಲ್ಲ. ಆಯೋಜಕರು ಫ್ಲೆಕ್ಸ್​, ಬ್ಯಾನರ್​, ಕಟೌಟ್​ಗಳನ್ನು ಜೋರಾಗಿಯೇ ಹಾಕಿದ್ದರು. ಆದರೆ ಹತ್ತರಿಂದ-ಹದಿನೈದು ಸಾವಿರ ಜನ ಸೇರುವ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು. ಅಷ್ಟೇ ಅಲ್ಲದೆ ಸಮಯಕ್ಕೆ ಸರಿಯಾಗಿ ಜನ ಸೇರದ ಹಿನ್ನೆಲೆ ಮುಖಂಡರು ಕೆಲಕಾಲ ಹೋಟೆಲ್​ನಲ್ಲಿ ಕಾಲಕಳೆಯುವಂತೆ ಮಾಡಿತ್ತು. ಇದು ಕೂಡ ಸಿದ್ದರಾಮಯ್ಯಗೆ ಮೊದಲ ಹಿನ್ನೆಲೆ ಎನ್ನುವಂತೆ ಆಗಿದ್ದಂತು ಸುಳ್ಳಲ್ಲ.
  4. ಎಷ್ಟು ಸಾವಿರ ಜನರು ಬರುವ ನಿರೀಕ್ಷೆ ಇತ್ತು, ಬಂದಿದ್ದು ಎಷ್ಟು ಸಾವಿರ ಜನರು..?-ಆಯೋಜಕರು ಹೇಳಿದಂತೆ ಕಾರ್ಯಕ್ರಮದಲ್ಲಿ ಸುಮಾರು 40-50 ಸಾವಿರ ಜನರು ಸೇರುವ ನಿರೀಕ್ಷೆ ಇತ್ತು, ಆದರೆ ನಿರೀಕ್ಷೆ ಮಾಡಿದಂತೆ ಜನ ಸೇರಲಿಲ್ಲ. ಕೇವಲ 10 ರಿಂದ 15 ಸಾವಿರ ಜನ ಸೇರುವಷ್ಟೊತ್ತಿಗೆ ಸಾಕು ಸಾಕಾಗಿ ಹೋಗಿತ್ತು.
  5. ಒಂದ್ವೇಳೆ ಜನ ಕಡಿಮೆ ಬಂದಿದ್ದರೇ ಕಾರಣಗಳು ಏನೇನು..?– ಜನರನ್ನು ಸಂಘಟನೆ ಮಾಡುವಲ್ಲಿ ಕಾರ್ಯಕ್ರಮ ಆಯೋಜನೆ ಜವಾಬ್ದಾರಿ ವಹಿಸಿಕೊಂಡಿದ್ದ ರಮೇಶ್​ ಕುಮಾರ್​ ಮತ್ತು ​ಗೆ ನಿರೀಕ್ಷಿತ ಮಟ್ಟದಲ್ಲಿ ಸಂಪೂನ್ಮೂಲ ಕ್ರೂಡಿಕರಣವಾಗಿಲ್ಲ. ಅದರ ಜೊತೆಗೆ ಎಲ್ಲ ಕ್ಷೇತ್ರಗಳಿಂದ ಅಂದರೆ ಒಂದು ಕ್ಷೇತ್ರದಿಂದ 10 ಸಾವಿರ ಜನರನ್ನು ಕರೆತರಲು ಸೂಚನೆ ನೀಡಿತ್ತಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಬರದೇ ಹೋಗಿದ್ದು ಕಾರಣ.
  6. 'ಸಂಪನ್ಮೂಲ ಕ್ರೂಡೀಕರಣ ಮತ್ತು ಜವಾಬ್ದಾರಿ' ವಹಿಸಿಕೊಳ್ಳುವಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಿಂದೇಟು ಹಾಕ್ತಿದ್ದಾರಾ.?-ಸದ್ಯ ರಮೇಶ್​ ಕುಮಾರ್ ಮತ್ತು ಟೀಂ ಸಿದ್ದರಾಮಯ್ಯ ಅವರನ್ನು ಬಲವಂತ ಮಾಡಿ ಕೋಲಾರಕ್ಕೆ ಬನ್ನಿ ಎಂದು ಕರೆದುಕೊಂಡು ಬಂದಿದ್ದಾರೆ. ಆದರೆ ಈ ಟೀಂಗೆ ಪ್ರಮುಖ ಸಂಪನ್ಮೂಲ ಒದಗಿಸುವ ವ್ಯಕ್ತಿಗಳಾಗಿದ್ದ ಕೊತ್ತೂರು ಮಂಜುನಾಥ್​ ಹಾಗೂ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸದ್ಯ ಕಾರ್ಯಕ್ರಮದಿಂದ ಹಿಂದೆ ಬಿದ್ದಿದ್ದಾರೆ ಹಾಗಾಗಿ ಉಳಿದ ಎಲ್ಲಾ ನಾಯಕರುಗಳು ಕಾರ್ಯಕ್ರಮದಲ್ಲಿ ದೈಹಿಕವಾಗಿ ತೊಡಗಿಸಿಕೊಳ್ಳುವಲ್ಲಿ ಇದ್ದಾರೆ ಆದರೆ ಸಂಪನ್ಮೂಲ ಒದಗಿಸುವಲ್ಲಿ ವಿಫಲವಾಗಿದ್ದಾರೆ.