ಶಿವಾಜಿ ಮೂರ್ತಿ ಮರುಸ್ಥಾಪನೆಗೆ ಹಿಂದೂ ಪರಿಷತ್ ಆಗ್ರಹ
ಮಹಾನಗರ ಪಾಲಿಕೆ ಉದ್ಯಾನದಲ್ಲಿ ಛತ್ರಿಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಮರುಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ, ಹಿಂದೂ ಪರಿಷದ್ ಸದಸ್ಯರು ಪಾಲಿಕೆ ಬಳಿ ಪ್ರತಿಭಟನೆ ನಡೆಸಿದರು. ಕೆಲ ತಿಂಗಳ ಹಿಂದೆ ಹಾನಿಗೊಂಡು ಬಿದ್ದಿದ್ದ ಮೂರ್ತಿಯನ್ನು ಇದುವರೆಗೆ ಸರಿಪಡಿಸಿಲ್ಲ. ಈ ಕುರಿತು, ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಕಳಪೆ ಕಾಮಗಾರಿಯೇ ಮೂರ್ತಿ ವಿರೂಪಗೊಂಡು ಬೀಳಲು ಕಾರಣ. ಹಾಗಾಗಿ, ಮೂರ್ತಿ ಅಳವಡಿಸಿದ ಗುತ್ತಿಗೆದಾರನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಅದೇ ಸ್ಥಳದಲ್ಲಿ ಹದಿನೈದು ದಿನದೊಳಗೆ ಶಿವಾಜಿಯ ನೂತನ ಮೂರ್ತಿಯನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ, ಪರಿಷದ್ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಪಾಲಿಕೆ ಅಧಿಕಾರಿಗೆ ಎಚ್ಚರಿಕೆ ನೀಡಿದರು. ಇನ್ನು ಪರಿಷತ್ದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಕಠಾರೆ, ಹುಬ್ಬಳ್ಳಿ ಅಧ್ಯಕ್ಷ ಸಿದ್ದು ರಾಯನಾಳ, ಮುಖಂಡರಾದ ಗಣೇಶ ಕದಂ, ವಿಜಯ ಮಾಮರಡಿ, ಭಾಗಿಯಾಗಿದ್ದರು...