ಸಾಯಿಬಾಬಾ ಮಂದಿರದಲ್ಲಿ ಲಕ್ಷ ದೀಪೂತ್ಸವ ಕಾರ್ಯಕ್ರಮ. | Dharwad |
ಏನಾದರೂ ಆಗು ಮೂದಲು ಮಾನವನಾಗು ಪ್ರೀತಿ,ವಾತ್ಸಲ್ಯ,ಕರುಣೆಯ ಜ್ಯೋತಿ ನಿನ್ನಲ್ಲಿ ಬೆಳಗಲಿ ಎಂದು ನವದೆಹಲಿ ತೋಂಟದಾರ್ಯ ಶಾಖಾಮಠದ ಪರಮಪೂಜ್ಯ ಶ್ರೀಜಗದ್ಗುರು ಡಾ. ಮಹಾಂತ ಸ್ವಾಮಿಗಳು,ಧಾರವಾಡದ ಗಾಂಧಿ ನಗರದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಲಕ್ಷ ದೀಪೂತ್ಸವ ಕಾಯ೯ಕ್ರಮವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿದ್ರು. ನೂರಾರು ಮಹಿಳೆಯರು ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿ ದೀಪ ಹಚ್ಚಿವ ಮೂಲಕ ಲಕ್ಷ ದೀಪೋತ್ಸವ ಆಚರಣೆ ನಡೆಸಿದ್ರು. ಸ್ವಾಮೀಜಿ ಜನರಿಗೆ ದೀಪೋತ್ಸವ ಕುರಿತು ಮಾಹಿತಿ ನೀಡುವ ಮೂಲಕ ನಿಮ್ಮ ಕುಟುಂಬದ ಹಾಗೂ ಸಮಾಜದ ಪ್ರತಿಯೂಂದು ವ್ಯಕ್ತಿ ಯಲ್ಲಿ ಪ್ರೀತಿಯ ಜ್ಯೋತಿ ಬೆಳಗಿಸಿ ಅಂದರೆ ಮಾತ್ರ ಜೀವನ ಪರಿಪೂಣ೯, ಯಾವರೀತಿ ಹೂ ರಾತ್ರಿ ಮೂಗ್ಗಾಗಿ, ಪ್ರಾತಹಕಾಲದಲ್ಲಿ ಅರಳಿ, ಸಾಯಂಕಾಲ ಬಾಡಿ ತನ್ನ ಬಾಳನ್ನು ಮುಡಪಾಗಿಟ್ಟು ದೇವರ ಹಾರವಾಗಿ,ಸುಮಂಗಲಿ ಯರ ಸೌಂದರ್ಯ ವ್ರದ್ದಿಸಲು ಸಹಕಾರಿಯಾಗಿ, ಮ್ರತ ವ್ಯಕ್ತಿ ಗೂ ತನ್ನ ಸುಮಧುರತೆ ನೀಡುತ್ತದೆಯೂ ಅದೇ ರೀತಿ ಮನುಷ್ಯ ರಾದ ನಾವು ಎಷ್ಟು ದಿನ ಬದುಕಿ ಬಾಳಿದ್ದೆವೆ ಅನ್ನುವುದಕ್ಕಿಂತ ಎಸ್ಟು ಜನರಿಗೆ ನಮ್ಮಿಂದ ಅನುಕೂಲ, ಉಪಯೊಗ, ಸಹಾಯ, ದಾನ, ಧಮ೯ ಮಾಡಿದ್ದೆಂಬುವದು ಮುಖ್ಯ ಎಂದರು.