ದೆಹಲಿಯಲ್ಲಿ ಮುಂದುವರೆದ ಭಾರೀ ಚಳಿ. ಜ.15ರವರೆಗೆ ಶಾಲೆಗಳಿಗೆ ರಜೆ ಘೋಷಣೆ
ನವದೆಹಲಿ: ಚಳಿಗೆ ದೆಹಲಿ ತತ್ತರಿಸಿ ಹೋಗಿದೆ. ಈ ಚಳಿಯು ಇನ್ನೂ ಕೆಲವು ದಿನ ಮುಂದುವರೆಯಲಿದ್ದು, ಜನವರಿ 8 (ನಿನ್ನೆ)ರಿಂದ ಜನವರಿ 15ರವರೆಗೆ ದೆಹಲಿಯಲ್ಲಿ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ದೆಹಲಿ ಸರ್ಕಾರದ ಸೂಚನೆಯಂತೆ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆಯನ್ನು ಹೊರಡಿಸಿದೆ.
ʻದೆಹಲಿಯಲ್ಲಿ ಶೀತ ಗಾಳಿಯ ಹೆಚ್ಚಳ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಖಾಸಗಿ ಶಾಲೆಗಳು ಜನವರಿ 15, 2023 ರವರೆಗೆ ಮುಚ್ಚಲು ಸೂಚಿಸಲಾಗಿದೆʼ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹೀಗಾಗಿ, ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿರುವ ಸರ್ಕಾರಿ ಶಾಲೆಗಳು ಜನವರಿ 15, 2023 ರವರೆಗೆ ಮುಚ್ಚಲ್ಪಡುತ್ತವೆ.