ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳಡಿಯಲ್ಲಿ ಕೊರೋನಾ ಸೋಂಕಿತರಾದವರಿಗೆ ( Corona Patient ) ಸರ್ಕಾರದಿಂದ ನೆರವು ಸಿಗುತ್ತದೆ. ಆದ್ರೇ.. ನೇರವಾಗಿ ಕೊರೋನಾ ಸೋಂಕಿನಿಂದಾಗಿ ಖಾಸಗಿ ಆಸ್ಪತ್ರೆಗೆ ( Privat Hospital ) ದಾಖಲಾಗಿ, ಚಿಕಿತ್ಸೆ ಪಡೆದು, ಆ ಬಳಿಕ ಸರ್ಕಾರಕ್ಕೆ ಚಿಕಿತ್ಸಾ ವೆಚ್ಚದ ಬಿಲ್ ಕಳಿಸಿದ್ರೇ..
ಪರಿಹಾರ ಸಿಗೋದಿಲ್ಲ ಎಂಬುದಾಗಿ ಸಚಿವ ಜೆಸಿ ಮಾಧುಸ್ವಾಮಿ ( Minister JC Madhuswamy ) ತಿಳಿಸಿದ್ದಾರೆ. ಈ ಕುರಿತಂತೆ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದಂತ ಅವರು, ಕೋವಿಡ್ ಸೋಂಕಿತರಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೇ ಸರ್ಕಾರಿ ಆಸ್ಪತ್ರೆಯಿಂದ ರೆಫೆರೆರ್ ಮೇಲೆ ದಾಖಲಾಗಿ ಚಿಕಿತ್ಸೆ ಪಡೆದಾಗ ಆ ವೆಚ್ಚವನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟರೇ ಪರಿಹಾರ ಸಿಗಲಿದೆ ಎಂದರು. ಸರ್ಕಾರದಿಂದ ಚಿಕಿತ್ಸೆಯ ವೆಚ್ಚವನ್ನು ಪಡೆಯೋದಕ್ಕಾಗಿ ನಿಯಮ ಇರೋದು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಆನಂತ್ರ ರೆಫೆರರ್ ಮೂಲಕ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯೋದಕ್ಕೆ ಅವಕಾಶವಿದೆ. ಅದನ್ನು ಬಿಟ್ಟು ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ, ಚಿಕಿತ್ಸೆಯ ಬಿಲ್ ಸರ್ಕಾರಕ್ಕೆ ಕಳುಹಿಸಿದ್ರೇ.. ಪರಿಹಾರ ನೀಡಲಾಗುವುದಿಲ್ಲ. ಮರಣಾನಂತರ ಸಿಗುವಂತ ಸೌಲಭ್ಯಗಳು ಕೂಡ ನೀಡಲಾಗುವುದಿಲ್ಲ ಎಂದು ಹೇಳಿದರು. ಈ ಮೂಲಕ ಕೊರೋನಾ ಸೋಂಕಿತರಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗೋರಿಗೆ ಬಿಗ್ ಶಾಕ್ ನೀಡಿದರು.