ಡಿ ಬಾಸ್‌ ʼಕ್ರಾಂತಿʼಗೆ ಮೂಹೂರ್ತ ಫಿಕ್ಸ್‌ : ಇನ್ಮುಂದೆ ಗಜ ಘರ್ಜನೆ ಪ್ರಾರಂಭ...!

ಡಿ ಬಾಸ್‌ ʼಕ್ರಾಂತಿʼಗೆ ಮೂಹೂರ್ತ ಫಿಕ್ಸ್‌ : ಇನ್ಮುಂದೆ ಗಜ ಘರ್ಜನೆ ಪ್ರಾರಂಭ...!

ಬೆಂಗಳೂರು : ಅಭಿಮಾನಿಗಳ ಅಭಿಮಾನಿ ಛಾಲೆಂಜಿಂಗ್ ಸ್ಟಾರ್‌ ದರ್ಶನ್ ನಟನೆಯ ಬಹು ನಿರೀಕ್ಷಿತ "ಕ್ರಾಂತಿ" ಸಿನಿಮಾ ತೆರೆ ಮೇಲೆ ಅಬ್ಬರಿಸುವ ದಿನ ಹತ್ತಿರವಾಗುತ್ತಿದೆ. ಡಿ ಬಾಸ್ ಅಭಿಮಾನಿಗಳು ಸಹ ಸಿನಿಮಾವನ್ನ ತೆರೆ ಮೇಲೆ ನೋಡೋಕೆ ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸದ್ಯ ಚಿತ್ರತಂಡ ಬಿಗ್‌ ಅಪಡೇಟ್‌ ಒಂದನ್ನು ನೀಡಿದ್ದು, 31ರದು ಸುದ್ದಿಗೋಷ್ಠಿ ಕರೆದಿದೆ.

ನಟ ಚಾಲೆಂಜಿಂಗ್‌ ಸ್ಟಾರ್‌ ಡಿ ಬಾಸ್‌ ದರ್ಶನ್‌ ಅಭಿನಯದ ಬಹು ನಿರೀಕ್ಷಿತಕುರಿತು ಮಾಹಿತಿ ನೀಡಿಲು ನಾಳೆ ಅಂದ್ರೆ ಅಕ್ಟೋಬರ್‌ 31ರಂದು ಕ್ರಾಂತಿ ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ. ಅಂದೇ ಚಿತ್ರ ಬಿಡುಗೆಯಾಗುವ ದಿನಾಂಕ ಹೊರ ಬಿಳಲಿದೆ ಎನ್ನಲಾಗಿದೆ. ಅಲ್ಲದೆ, ಜನವರಿ 26 ಗಣರಾಜ್ಯೋತ್ಸವದಂದು ಸಿನಿಮಾ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ, ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.ಬಹು ನಿರೀಕ್ಷಿತ ಸಿನಿಮಾ ಕ್ರಾಂತಿಗೆ ವಿ.ಹರಿಕೃಷ್ಣ ಆಕ್ಷನ್‌ ಕಟ್‌ ಹೇಳಿದ್ದಾರೆ. ದರ್ಶನ್‌ ಜೊತೆಗೆ ರಚಿತಾ ರಾಮ್‌, ವಿ.ರವಿಚಂದ್ರನ್‌, ಬಹುಭಾಷಾ ನಟ ಸಂಪತ್‌ ರಾಜ್‌ ನಟಿಸಿದ್ದಾರೆ. ಚಿತ್ರಕ್ಕೆ ಮೀಡಿಯಾ ಹೌಸ್‌ ಬ್ಯಾನರ್‌ ಅಡಿ ಬಿ.ಸುರೇಶ್‌ ಹಾಗೂ ಶೈಲಜಾ ನಾಗ್‌ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.