ಛೂ ಮಂತರ್' ಎಂದು ನಗಿಸಿ ಭಯ ಹುಟ್ಟಿಸಲು ಬರ್ತಿದ್ದಾರೆ ಶರಣ್- ಚಿಕ್ಕಣ್ಣ

ಗುರುಶಿಷ್ಯರು' ಸಿನಿಮಾದಲ್ಲಿ ನಟಿಸಿದ್ದ ನಟ ಶರಣ್ ಈ 'ಛೂ ಮಂತರ್' ಎನ್ನುತ್ತಿದ್ದಾರೆ. ಚಿತ್ರದಲ್ಲಿ ಮೇಘನಾ ಗಾಂವ್ಕರ್ ಹಾಗೂ ಅದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ. ಶರಣ್ ಜೊತೆ ಕಾಮಿಡಿ ಕಳಗುಳಿ ಇಡಲು ಮತ್ತೊಮ್ಮೆ ಚಿಕ್ಕಣ್ಣ ಕೈ ಜೋಡಿಸಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಹಾಡುಗಳ ಚಿತ್ರೀಕರಣ ನಡೀತಿದೆ.