CM Bommai Govt @100days: ಬೊಮ್ಮಾಯಿ ಸಿಎಂ ಆಗಿ 100 ದಿನ; ಸಂಭ್ರಮವನ್ನು ಕಸಿಯಿತಾ ಹಾನಗಲ್ ಸೋಲು?

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಬಸವರಾಜ ಬೊಮ್ಮಾಯಿ(Basavaraj Bommai) ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು 100 ದಿನಗಳು ಸಂದಿವೆ. ಈ ಬಗ್ಗೆ ತಮ್ಮ ಆರ್.ಟಿ.ನಗರ ನಿವಾಸದಲ್ಲಿ (RT Nagar House) ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ನೂರು ದಿನ ಅನ್ನೋದು ವಿಶೇಷ ಅಲ್ಲ. ನೂರು ದಿನಗಳಲ್ಲಿ ಏನು ಮಾಡಿದೀವಿ ಅನ್ನೋದು ಮುಖ್ಯ. ನೂರು ದಿನ ಒಂದು ವರ್ಷದ ಹಾಗೆ ಪ್ರಮುಖ ಘಟ್ಟ ಅಲ್ಲ. ನೂರು ದಿನಗಳಲ್ಲಿ ಏನು ಕೆಲಸ ಮಾಡಿದೀವಿ ಅಂತ ತಿಳಿಸುವ ಕೆಲಸ ಮಾಡ್ತೀವಿ. ನೂರು ದಿನಗಳಲ್ಲಿ ನಮ್ಮ ಅಭಿವೃದ್ಧಿ, ಸವಾಲುಗಳ (Development, Challenges) ಬಗ್ಗೆ ಜನರಿಗೆ ಸ್ಥೂಲ ಮಾಹಿತಿ ಕೊಡ್ತೇವೆ ಎಂದರು. ಇನ್ನು ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಆಚರಿಸುತ್ತೇನೆ ಎಂದು ತಿಳಿಸಿದರು. ಇವತ್ತು ಹಿರಿಯರ ಹಬ್ಬ, ಹಾಗಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದು, ನಾಡಿದ್ದು ಬೆಂಗಳೂರಿಗೆ ವಾಪಸ್ ಆಗುತ್ತೇನೆ ಎಂದರು.