ರಾಹುಲ್ ಯಾತ್ರೆ ಆಂಧ್ರಕ್ಕೆ ಪ್ರವೇಶ

ರಾಹುಲ್ ಯಾತ್ರೆ ಆಂಧ್ರಕ್ಕೆ ಪ್ರವೇಶ

ಬೆಂಗಳೂರು,ಅ.೧೮- ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಕಾರಣದಿಂದ ನಿನ್ನೆ ಬಿಡುವು ನೀಡಲಾಗಿದ್ದ ರಾಹುಲ್‌ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಇಂದು ಪುನಾರಂಭಗೊಂಡಿದ್ದು, ಯಾತ್ರೆ ಬಳ್ಳಾರಿಯಿಂದ ಆಂಧ್ರಪ್ರದೇಶ ಪ್ರವೇಶಿಸಿದೆ.
ಇಂದು ಬೆಳಿಗ್ಗೆ ೭ ಗಂಟೆಗೆ ರಾಹುಲ್ ಅವರು ಬಳ್ಳಾರಿಯ ಹಾಲಹರವಿಯಿಂದ ನೂರಾರು ಮಂದಿ ಕಾರ್ಯಕರ್ತರ ಜತೆ ಹೆಜ್ಜೆ ಹಾಕಿದ್ದು, ಯಾತ್ರೆ ಬೆಳಿಗ್ಗೆ ೧೧ ಗಂಟೆಗೆ ಆಂಧ್ರಪ್ರದೇಶದ ಹಾತಿಬೆಲ್‌ಗಾಲ್ ತಲುಪಿದ್ದು, ಅಲ್ಲಿ ಪಾದಯಾತ್ರಿಗಳು ಉಪಾಹಾರ ಸೇವಿಸಿ ವಿಶ್ರಾಂತಿ ಪಡೆದಿದ್ದಾರೆ.ಭಾರತ್ ಜೋಡೊ ಯಾತ್ರೆ ಸಂಜೆ ೪.೩೦ಕ್ಕೆ ಪುನಾರಂಭಗೊಂಡು ಆಂಧ್ರಪ್ರದೇಶದ ಮನುಕುರ್ತಿಯಲ್ಲಿ ೬.೩೦ಕ್ಕೆ ಸಭೆ ಇದ್ದು, ನಂತರ ಛಾಗಿ ವಿಲೇಜ್‌ನಲ್ಲಿ ರಾಹುಲ್‌ಗಾಂಧಿ ಅವರು ವಾಸ್ತವ್ಯ ಹೂಡುವರು.ಭಾರತ್ ಜೋಡೊ ಯಾತ್ರೆ ರಾಜ್ಯದ ಗಡಿದಾಟಿ ಆಂಧ್ರ ಪ್ರವೇಶಿಸುತ್ತಿದ್ದಂತೆಯೇ ಆಂಧ್ರದ ಕಾಂಗ್ರೆಸ್ ಕಾರ್ಯಕರ್ತರುಗಳು ಹಾಗೂ ಮುಖಂಡರುಗಳು ಅದ್ಧೂರಿ ಸ್ವಾಗತ ಕೋರಿದರು.ರಾಹುಲ್‌ಗಾಂಧಿ ಅವರ ಜತೆ ಇಂದೂ ಸಹ ನೂರಾರು ಕಾರ್ಯಕರ್ತರು ಉತ್ಸಾಹ, ಹುರುಪಿನಿಂದ ಹೆಜ್ಜೆ ಹಾಕಿದ್ದು, ಕಾಂಗ್ರೆಸ್ ಪಕ್ಷದ ಪರ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು.