ಮಾಜಿ ಸಿಎಂ 'BSY' ಮಗನ ಮನೆಯಲ್ಲೇ ಪೊಲೀಸ್ ನೇಮಕಾತಿ ನಡೆದಿದೆ : ಸಿದ್ದರಾಮಯ್ಯ

ಮೈಸೂರು : B.S ಯಡಿಯೂರಪ್ಪ ಮಗನ ಮನೆಯಲ್ಲೇ ಪೊಲೀಸ್ ನೇಮಕಾತಿ ನಡೆದಿದೆ, ಒಂದೊಂದು ಪೋಸ್ಟ್ ಗೆ 50 ರಿಂದ 80 ಲಕ್ಷ ವಸೂಲಿ ಮಾಡಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನೋಡಲೇ ಇಲ್ಲ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ರುಣಾ ಕ್ಷೇತ್ರ ವ್ಯಾಪ್ತಿಯ ಬಿಳುಗಲಿ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಹೈಕಮಾಂಡ್ ಅಳೆದು ತೂಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕಮಾಂಡ್ ಅಳೆದು ತೂಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಹೇಳಿದ್ದಾರೆ , ಬಾದಾಮಿ ಕ್ಷೇತ್ರ ದೂರವಾಗಿದ್ದರಿಂದ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ, ನಾನು ರಾಜ್ಯ ಸುತ್ತಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ, ಬಿಜೆಪಿಯವರ ಮನೆ ಹಾಳಾಗ ಬಡವರಿಗೆ ಒಂದು ಮನೆ ಕೂಡ ಕೊಡಲಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಅಧಿಕಾರಕ್ಕೆ ಬಂದರೆ 20 ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ, ಕೊಟ್ಟ ಭರವಸೆ ಈಡೇರಿಸದಿದ್ದರೆ ಮತ್ತೆ ಅಧಿಕಾರದಲ್ಲಿ ಇರಲ್ಲ , ಬೊಮ್ಮಾಯಿ ಧರ್ಮರಾಯನ ಥರ ಮಾತನಾಡುತ್ತಾರೆ. ಇಂಥವರಿಗೆ ಮತ್ತೆ ಮತ ಹಾಕಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಆರ್ ಎಸ್ ಎಸ್ ನವರು ಸಂವಿಧಾನ ಪರ ಇಲ್ಲ, ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದ್ದಾರೆ.ಯಡಿಯೂರಪ್ಪ ಮಗನ ಮನೆಯಲ್ಲೇ ಪೊಲೀಸ್ ನೇಮಕಾತಿ ನಡೆದಿದೆ ಒಂದೊಂದು ಪೋಸ್ಟ್ ಗೆ 50 ರಿಂದ 80 ಲಕ್ಷ ವಸೂಲಿ ಮಾಡಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನೋಡಲೇ ಇಲ್ಲ ಎಂದಿದ್ದಾರೆ.
SDPI ಮುಖಂಡನ ವಿರುದ್ಧ ದೂರು
ಶಾಂತಿ ಕದಡುವ, ದ್ವೇಷ ಹರಡುವ ಮತ್ತು ಮಾನಹಾನಿ ಮಾಡುವ ಉದ್ದೇಶದ ಹೇಳಿಕೆ ಕೊಟ್ಟ ಚಿತ್ರದುರ್ಗ ಜಿಲ್ಲಾ ಎಸ್ಡಿಪಿಐ ಅಧ್ಯಕ್ಷ ಜಾಕೀರ್ ಹುಸೇನ್ ವಿರುದ್ಧ ಇನ್ನೊಂದು ದೂರು ಸಲ್ಲಿಸಲಾಯಿತು.ಮುಸ್ಲಿಮರ ಮೀಸಲಾತಿ ರದ್ದು ಮಾಡಿದ ಸಂಬಂಧ ಪ್ರತಿಭಟನೆಯಲ್ಲಿ ಮಾತನಾಡಿದ ಜಾಕೀರ್ ಹುಸೇನ್ ಅವರು, 'ನಮ್ಮ ಹಕ್ಕನ್ನು ಹೀನಾಯವಾಗಿ ಕಸಿದುಕೊಳ್ಳಲಾಗಿದೆ. ನಮ್ಮ ಹಕ್ಕನ್ನು ವಾಪಸ್ ಕೊಡದಿದ್ದರೆ ಸಿಎಂ ಬೊಮ್ಮಾಯಿಯವರ ಬಟ್ಟೆ ಬಿಚ್ಚಿಸುತ್ತೇವೆ; ಹಿಜಾಬ್, ಆಜಾನ್ಗೆ ತಲೆ ಕೊಟ್ಟೆವು. ಮೀಸಲಾತಿ ವಿಚಾರದಲ್ಲಿ ತಲೆ ಹೋದರೂ ಚಿಂತೆಯಿಲ್ಲ. ಜೈಲಿಗೆ ಹೋದರೂ ಚಿಂತೆಯಿಲ್ಲ. ನಾವೆಲ್ಲ ಉಗ್ರವಾಗಿ ಹೋರಾಡುತ್ತೇವೆ' ಎಂದು ಹೇಳಿದ್ದರು ಎಂದು ಗಮನ ಸೆಳೆಯಲಾಗಿದೆ.
ಸಾಮಾಜಿಕ ಶಾಂತಿಗೆ ಹಾನಿ ಉಂಟು ಮಾಡುವ ಮತ್ತು ದ್ವೇಷ ಹರಡುವ ಉದ್ದೇಶದ ಈ ಮಾತುಗಳನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಮನವಿಯಲ್ಲಿ ಕೋರಲಾಗಿದೆ.