ಡಿಸೆಂಬರ್ 1ರಿಂದ ಫೇಸ್‌ಬುಕ್ ಆ್ಯಪ್‌ನಲ್ಲಿ ಭಾರೀ ಬದಲಾವಣೆ

ಫೇಸ್‌ಬುಕ್ ಬಳಕೆದಾರರು ತಮ್ಮ ಫ್ರೊಫೈಲ್ ಬಯೋದಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ, ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳನ್ನು ಹಾಕಿದ್ದರೆ ಸ್ವಯಂಚಾಲಿತವಾಗಿ ತೆಗೆದುಹಾಕುವ ಕ್ರಮಕ್ಕೆ ಫೇಸ್‌ಬುಕ್ ಸಂಸ್ಥೆ ಮುಂದಾಗಿದೆ. ಇದೇ ಡಿಸೆಂಬರ್ 1 ರಿಂದ ಬದಲಾವಣೆಯನ್ನು ತರಲಾಗುತ್ತಿದೆ. ಧರ್ಮ, ರಾಜಕೀಯ, ವಿಳಾಸ ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳು ಅನವಶ್ಯಕವಾಗಿವೆ ಎಂದು ಹೊಸ ಬದಲಾವಣೆಯನ್ನು ತರಲು ಮುಂದಾಗಿದೆ ಎಂದು ತಿಳಿದುಬಂದಿದೆ.