ಕ್ರಿಶ್ಚಿಯನ್ನಿಂದ ಮತಾಂತರ ಆಗುವುದರ ಜೊತೆಗೆ ಮುಸ್ಲಿಂ ಮತಾಂತರ ಕಂಡು ಬಂದಿದೆ; ಆರ್. ಅಶೋಕ್
ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಬಳಿಕ ರಾಜ್ಯದಲ್ಲಿ ಮೊದಲ ಪ್ರಕರಣ ಕುರಿತು ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.ಸಾಮಾನ್ಯವಾಗಿ ಕ್ರಿಶ್ಚಿಯನ್ನಿಂದ ಮತಾಂತರ ಆಗುತ್ತೆ ಅಂತ ಎಲ್ಲಾರು ಅಂದುಕೊಂಡಿದ್ದರು. ಇದೀಗ ಮುಸ್ಲಿಂ ಮತಾಂತರ ಕಂಡು ಬಂದಿದೆ ಎಂದು ಹೇಳಿದ್ದಾರೆ.
ನಗರದ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಂಡ್ಯದ ಹಿಂದೂ ವ್ಯಕ್ತಿಯ ಅಕೌಂಟಿಗೆ ಹಣ ನೀಡಿ ಮತಾಂತರ ಮಾಡಲಾಗಿದೆ. ಅಷ್ಟೇ ಅಲ್ಲದೆ ಬೇರೆ ಕಡೆ ಕರೆದುಕೊಂಡು ಹೋಗಿ ಶಿವ, ಬನಶಂಕರಿ ಎಲ್ಲ ದೇವರು ಒಳ್ಳೆಯವರಲ್ಲ ಅಂತ ಹೇಳಿದ್ದಾರೆ. ಮುಸ್ಲಿಂಗೆ ಮತಾಂತರ ಆದರೆ, ದೇವರು ಮನೆಯಲ್ಲೇ ಪ್ರತ್ಯಕ್ಷ ಆಗ್ತಾರೆ ಅಂತ ಪ್ರಚೋದನೆ ನೀಡಿದ್ದಾರೆ.ಮೂರು ಜನರಿಗೆ ಎಲ್ಲಾ ರೀತಿಯ ಟ್ರೈನಿಂಗ್ ಕೊಟ್ಟಿದ್ದಾರೆ. ಅಲ್ಲದೆ ದನದ ಮಾಂಸ ತಿನ್ನಲು ಬಲವಂತ ಮಾಡಿದ್ದಾರೆ, ತಿನ್ನಲ್ಲ ಅಂದಿದ್ದಕ್ಕೆ ಟಾರ್ಚರ್ ಮಾಡಿದ್ದಾರೆ. ಬನಶಂಕರಿಯಲ್ಲಿರೋ ಕಬರ್ಸ್ತಾನ್ಗೆ ಕರೆದೊಯ್ದು ಟಾರ್ಚರ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧನ ಆಗಿರೋದು ಕಾಂಗ್ರೆಸ್ ಕಾರ್ಪೊರೇಟರ್. ಎರಡು ಬಾರಿ ಕಾರ್ಪೊರೇಟರ್ ಆಗಿದ್ದರು. ಪೊಲೀಸರು ಮೂವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ ಎಂದರು.