ವಿಧಾನಪರಿಷತ್‌ ಸಭಾಪತಿ ಸ್ಥಾನದ ಚುನಾವಣೆ; ಮತ್ತೆ ಹೊರಟ್ಟಿ ಸಭಾಪತಿ?

ವಿಧಾನಪರಿಷತ್‌ ಸಭಾಪತಿ ಸ್ಥಾನದ ಚುನಾವಣೆ; ಮತ್ತೆ ಹೊರಟ್ಟಿ ಸಭಾಪತಿ?

ರಾಜ್ಯ ವಿಧಾನಪರಿಷತ್‌ ಸಭಾಪತಿ ಸ್ಥಾನದ ಚುನಾವಣೆ ಡಿ.21ಕ್ಕೆ ನಿಗದಿಯಾಗಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.19ರಿಂದ 30 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಸಭಾಪತಿ ಚುನಾವಣೆ ನಡೆಯಲಿದೆ. ಬಸವರಾಜ ಹೊರಟ್ಟಿ ಮತ್ತೂಮ್ಮೆ ಸಭಾಪತಿ ಆಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ರಘುನಾಥ್‌ ರಾವ್‌ ಮಲ್ಕಾಪುರೆ ಅವರು ಈಗ ಹಂಗಾಮಿ ಸಭಾಪತಿಗಳಾಗಿದ್ದಾರೆ.