ಹೀಗೂ ಉಂಟೇ..! ಸರ್ಕಾರಿ ಕಚೇರಿಯಲ್ಲಿ ಮೇಲ್ಛಾವಣಿ ಬೀಳುವ ಭಯದಿಂದ 'ಹೆಲ್ಮೆಟ್' ಧರಿಸಿ ಕೆಲ್ಸ ಮಾಡ್ತೀರೊ ನೌಕರರು

ಉತ್ತರಪ್ರದೇಶ : ಬರೌತ್ ಪಟ್ಟಣದ ರಾಜ್ಯ ವಿದ್ಯುತ್ ಇಲಾಖೆಯ ಕಟ್ಟಡದ ಶಿಥಿಲಾವಸ್ಥೆಯಿಂದಾಗಿ ಎಂಜಿನಿಯರ್ಗಳು, ಗುಮಾಸ್ತರು ಮತ್ತು ಗುತ್ತಿಗೆ ಕಾರ್ಮಿಕರು ಸೇರಿದಂತೆ 40 ಕ್ಕೂ ಹೆಚ್ಚು ನೌಕರರು ಕಟ್ಟಡದೊಳಗೆ ಕೆಲಸ ಮಾಡುವಾಗ ಹೆಲ್ಮೆಟ್ ಧರಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ಬೆಳಕಿಗೆ ಬಂದಿದು, ಸಾಮಾಜಿಕ ಜಾಲತಾಣಗಳಲ್ಲೂ ವಿಡಿಯೋ ವೈರಲ್ ಆಗುತ್ತಿದೆ.ಮೇಲ್ಛಾವಣಿಯಿಂದ ಹಲಗೆಗಳು ಯಾವಾಗ ಬಿದ್ದು ನಮಗೆ ಹಾನಿಯಾಗುತ್ತದೆ ಎಂದು ಕಾರಣ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಹೆಲ್ಮೆಟ್ ಧರಿಸುತ್ತೇವೆ. ಕಾರ್ಮಿಕರು ಗಾಯಗೊಂಡ ಘಟನೆಗಳು ಈ ಹಿಂದೆ ನಡೆದಿವೆ. ಯಾವುದೇ ದೊಡ್ಡ ಅಪಘಾತ ಸಂಭವಿಸಿಲ್ಲವಾದರೂ, ಇದು ತುಂಬಾ ಅಪಾಯಕಾರಿ'ಯಾಗಿದೆ. ಮಳೆಗಾಲದಲ್ಲಿ ಮೇಲ್ಛಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದರಿಂದ ಮತ್ತು ಮಳೆನೀರು ಹನಿಯ ಬಿದ್ದು ಮತ್ತಷ್ಟು ಛಾವಣಿಗೆ ಹದಗೆಡುತ್ತದೆ' ಎಂದು ಕಂಪ್ಯೂಟರ್ ಆಪರೇಟರ್ ಹೇಳಿದರು