4 ಕೋಟಿ ರೂ. ಮೌಲ್ಯದ ಚಿನ್ನದೊಂದಿಗೆ ಮಗಳು ನಾಪತ್ತೆ: ಬೆಂಗಳೂರಿನಲ್ಲಿ ಹೆತ್ತವರಿಂದಲೇ ದೂರು!
ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಲಾಕರ್ ನಲ್ಲಿ ಇಡುತ್ತೇನೆ ಎಂದು ಹೆತ್ತವರನ್ನು ನಂಬಿಸಿ ಹೋದ ಮಗಲು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜೆಪಿ ನಗರ ಠಾಣೆಯಲ್ಲಿ ತಾಯಿ ವಿಜಯಲಕ್ಷ್ಮೀ ತಮ್ಮ ಮಗಳು ತೇಜವಂತಿ 4 ಕೋಟಿ ರೂ.
ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ತಾಯಿ ವಿಜಯಲಕ್ಷ್ಮೀ ಆಪರೇಷನ್ ಮಾಡಿಸಿಕೊಂಡಿದ್ದು, ಆರೋಗ್ಯ ವಿಚಾರಿಸಲು ಬಂದಿದ್ದ ಪುತ್ರಿ ತೇಜವಂತಿ, ಚಿನ್ನಾಭರಣಗಳನ್ನು ಲಾಕರ್ ನಲ್ಲಿಡುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದಳು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತಾಯಿ ದೂರಿನಲ್ಲಿ ಹೇಳಿರುವ ಪ್ರಕಾರ ಮಗಳು, ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾರೆಂದು ಆರೋಪ ಮಾಡಿದ್ದಾರೆ. ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ 7.5 ಕೆಜಿ ವಜ್ರ ಹಾಗೂ ಚಿನ್ನಾಭರಣ ವಂಚಿಸಿದ್ದಾಳೆಂದು ಮಗಳ ವಿರುದ್ಧವೇ ತಾಯಿ ದೂರು ದಾಖಲು ಮಾಡಿದ್ದಾರೆ.
ಈ ಕುರಿತು ಜೆಪಿ ನಗರ ಠಾಣೆಯಲ್ಲಿ ತಾಯಿ ವಿಜಯಲಕ್ಷ್ಮಿ ದೂರು ದಾಖಲು ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಜೆಪಿ ನಗರ ಪೊಲೀಸರು ಮಗಳಾದ ತೇಜವಂತಿ ಶೋಧ ಕಾರ್ಯಕ್ಕೆ ಇಳಿದಿದ್ದಾರೆ.