ನಾವು 2ಎ ವರ್ಗದವರಿಗೆ, ಪರಿಶಿಷ್ಟರಿಗೆ ಅನ್ಯಾಯ ಮಾಡಲು ಬಯಸುವುದಿಲ್ಲ: ಡಿ ಕೆ ಶಿವಕುಮಾರ್

ಹುಬ್ಬಳ್ಳಿ, ಮೀಸಲಾತಿಯಲ್ಲಿ ಯಾವ ಸಮುದಾಯವೂ 2ಸಿ ಹಾಗೂ 2ಡಿಯನ್ನು ಕೇಳಿಲ್ಲ. ಸರ್ವರಿಗೂ ಸಮಬಾಳು, ಸಮಪಾಲು ಎಂಬ ನೀತಿ ಮೇಲೆ ಮೀಸಲಾತಿ ಕೇಳಿದ್ದಾರೆ. ನಾವು 2ಎ ವರ್ಗದವರಿಗೆ, ಪರಿಶಿಷ್ಟರಿಗೆ ಅನ್ಯಾಯ ಮಾಡಲು ಬಯಸುವುದಿಲ್ಲ ಎಂಮದು ಕೆಪಿಸಿಸಿ ಅಧ್ಯಕ್ಷ ಡಿ.
ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ವಿಚಾರವಾಗಿ ಅವರವರ ಹಕ್ಕನ್ನು ಎಲ್ಲರೂ ಕೇಳಿದ್ದಾರೆ. ಈ ವಿಚಾರ ಶೇ.50 ಕ್ಕಿಂತ ಹೆಚ್ಚಾಗಬೇಕು ಎಂದು ತೀರ್ಮಾನವಾದ ಮೇಲೆಯೇ ಈಗ ಶೇ.10 ರ ಆರ್ಥಿಕ ದುರ್ಬಲರ ವರ್ಗದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಮೂರು ತಿಂಗಳ ನಂತರ ಇದರ ಘೋಷಣೆ ಮಾಡುತ್ತಾರಂತೆ. ಮೂರು ತಿಂಗಳ ನಂತರ ಇವರಿಂದ ಘೋಷಣೆ ಮಾಡಲು ಸಾಧ್ಯವೇ? ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ನಾವುಗಳು ಯಾರೂ ಭಿಕ್ಷುಕರಲ್ಲ, ನಮ್ಮ ಹೋರಾಟ ಮುಂದುವರಿಯಲಿದೆ. ಜನರಿಗೆ ನ್ಯಾಯ ಒದಗಿಸಿ ಎಲ್ಲ ಸಮುದಾಯಗಳ ಬೇಡಿಕೆಗೂ ನಾವು ಬೆಂಬಲ ನೀಡುತ್ತೇವೆ. ಈ ಬಗ್ಗೆ ನಮ್ಮ ಮುಖಂಡರ ಜತೆ ಚರ್ಚೆ ಮಾಡಿ ಪಕ್ಷದ ಅಚಲ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಹೇಳಿದರು.
ಇನ್ನೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಆದಾಯವನ್ನು ಡಬಲ್ ಮಾಡುವುದಾಗಿ ಹೇಳಿದ್ದರು. ಯಾವ ರೈತರ ಆದಾಯ ಡಬಲ್ ಆಗಿದೆ ಎಂದು ಹೇಳಬೇಕು. ಹಾಲಿನ ದರದ ವಿಚಾರದಲ್ಲಿ ಪಶುಸಂಗೋಪನೆ ಮಾಡುವವರಿಗೆ ಯಾವ ನ್ಯಾಯ ಒದಗಿಸಿದ್ದಾರೆ ಎಂದು ಸರ್ಕಾರವೇ ಹೇಳಬೇಕು. ಈಗಾಗಲೇ ಪೂಜೆ ಮಾಡಿದ್ದರೂ ಈಗ ಮತ್ತೊಮ್ಮೆ ಬಂದು ಪೂಜೆ ಮಾಡುತ್ತಿದ್ದಾರೆ ಮಾಡಲಿ. ಸಹಕಾರ ಸಚಿವಾಲಯದಿಂದ ಹಾಲು ಉತ್ಪಾದಕರನ್ನು ಸೇರಿಸಿ ಇಂದು ಕಾರ್ಯಾಕ್ರಮ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಅವರು ಹಳೇ ಮೈಸೂರು ಭಾಗದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹಳೇ ಮೈಸೂರು ಭಾಗ ಇರಲಿ, ನಾವು ಧಾರವಾಡದಲ್ಲಿ ನಿಂತಿದ್ದು, ಮಹದಾಯಿ ವಿಚಾರವಾಗಿ ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಒಟ್ಟು ತ್ರಿಬಲ್ ಇಂಜಿನ್ ಸರ್ಕಾರ ಇದ್ದರೂ ನಮ್ಮ ಜನರಿಗೆ ನ್ಯಾಯ ಒದಗಿಸಿಕೊಡಲು ಆಗಿಲ್ಲ. ನಾವು ಈ ವಿಚಾರವಾಗಿ ಹೋರಾಟಕ್ಕೆ ಮುಂದಾದಾಗ ನಮಗೆ ಹೆಚ್ಚಿನ ಜನಬೆಂಬಲ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಪ್ರಕಟಿಸಿರುವ ಆದೇಶಕ್ಕೆ ನಿರ್ದಿಷ್ಟ ದಿನಾಂಕವೂ ಇಲ್ಲ. ಇದರಲ್ಲಿ ಅಂತಿಮವಾಗಿ ಗೋವಾ ಹಾಗೂ ಮಹರಾಷ್ಟ್ರದ ತಕರಾರಿನ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಏನಾಗುತ್ತದೆ ಎಂದು ನೋಡಿಕೊಂಡು ಯೋಜನೆ ಮಾಡುವುದಾಗಿ ಹೇಳಿದ್ದಾರೆ. ಇವರು ಕೇವಲ ರಾಜಕೀಯವಾಗಿ ಚಾಕಲೇಟ್ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಹಿಂದೆ ಯಡಿಯೂರಪ್ಪನವರು ಒಂದೇ ದಿನದಲ್ಲಿ ಯೋಜನೆ ಆರಂಭಿಸುವುದಾಗಿ ಹೇಳಿದ್ದರು. ಇವರು ಎಷ್ಟು ಸುಳ್ಳು ಹೇಳುತ್ತಾರೆ. ಪ್ರಹ್ಲಾದ್ ಜೋಷಿ ಅವರು ಉನ್ನತ ಸ್ಥಾನದಲ್ಲಿದ್ದು, ಇಷ್ಟೋಂದು ಸುಳ್ಳು ಯಾಕೆ ಹೇಳುತ್ತಿದ್ದಾರೆ? ಈ ಭಾಗದ ಜನರು ದಡ್ಡರಾ? ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಜನರ ಧ್ವನಿ, ಆಕ್ರೋಶ ನಮ್ಮ ಕಾರ್ಯಕ್ರಮದಲ್ಲಿ ವ್ಯಕ್ತವಾಗಲಿದೆ. ಸರ್ಕಾರ ನಿಮ್ಮನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ. ಇಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ವಿಚಾರವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಪಕ್ಷದ ಎಲ್ಲ ನಾಯಕರು ಈಗ ಅಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದೇವೆ. ಬಿಜೆಪಿ ಸರ್ಕಾರ ಗೋವಾ ಮತ್ತು ಮಹಾರಾಷ್ಟ್ರದ ತಕರಾರನ್ನು ತೆರವುಗೊಳಿಸಿ ಈ ಯೋಜನೆ ಮಾಡಲಿ. ಅದು ಯಾಕೆ ಸಾಧ್ಯವಾಗುತ್ತಿಲ್ಲ? ಗೋವಾದಲ್ಲಿ 1 ಸೀಟು ಮುಖ್ಯವೋ ಇಲ್ಲಿನ 27 ಕ್ಷೇತ್ರಗಳು ಮುಖ್ಯವೋ? ಇದು ಕರ್ನಾಟಕ ಜನತೆಗೆ ಆಗುತ್ತಿರುವ ಅನ್ಯಾಯದ ಪರಮಾವಧಿ. ಇದೆಲ್ಲವೂ ಜನರ ಕಣ್ಣೊರೆಸುವ, ತಪ್ಪು ದಾರಿಗೆ ಎಳೆಯುವ ತಂತ್ರವಾಗಿದೆ ಎಂದು ತಿಳಿಸಿದರು.
ನೀವು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದು, ಡಿಪಿಆರ್ ನಲ್ಲಿ ಈಗ ಏನು ಬದಲಾವಣೆ ಆಗಿದೆ ಎಂದು ಪ್ರಶ್ನೆಗೆ ಉತ್ತರಿಸಿ 'ನಾನು ಅನೇಕ ಸಭೆ ಮಾಡಿದ್ದೆ. ಇವರು ಇಳಿಜಾರಿರುವ ಕಡೆಗಳಲ್ಲಿ ನೀರನ್ನು ಮೇಲೆತ್ತುವುದಾಗಿ ಹೇಳಿದ್ದಾರೆ. ನೀರು ಸಂಪರ್ಕ ವಿಚಾರ ಒಂದು ಬಿಟ್ಟು, ಉಳಿದ ಕೆಲಸಗಳನ್ನು ಮಾಡಬಹುದಲ್ಲವೇ? ನಿಮ್ಮ ಕೆಲಸ ನೀವು ಮಾಡಿ. ನಿಮ್ಮ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯ ಜನರ ಹಿತ ಕಾಪಾಡಿ ಎಂದು ಹೇಳಿದರು.