ಲೈಬ್ರರಿಯಲ್ಲೇ ಓದಿ ಮಲಗುವ ವಿದ್ಯಾರ್ಥಿಗಳು

ಇದೇ ಅಕ್ಟೋಬರ್ 24 ರಿಂದ ಪೊಲೀಸ ಕಾನ್ಸ್ಟೇಬಲ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ ಈ ಹಿನ್ನೆಲೆಯಲ್ಲಿ ವಿದ್ಯಾಕಾಶಿ ಧಾರವಾಡದಲ್ಲಿ ವಿದ್ಯಾರ್ಥಿಗಳು ಭಾರಿ ತಯಾರಿ ನಡೆಸಿದ್ದಾರೆ. ಆದರೆ, ಪರೀಕ್ಷೆಗಾಗಿ ಧಾರವಾಡದ ಸಪ್ತಾಪುರದ ಚಿಗುರು ಲೈಬ್ರರಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ಪಿ.ಜಿ ಸಿಗದೇ,ರೂಮು ಹಿಡಿಯಲಾಗದೇ, ಬಹಳ ಕಷ್ಟ ಎದುರಿಸುವಂತಾಗಿದೆ. ಇದರಿಂದಾಗಿ ಚಿಗುರು ಲೈಬ್ರರಿಯಲ್ಲಿ ಓದುವ ವಿದ್ಯಾರ್ಥಿಗಳು ಅಲ್ಲಿಯೇ ನಂತರ ಅಲ್ಲೇ ಮಲಗುವಂತಾಗಿದೆ. ಲೈಬ್ರರಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನದ ನಂತರ ವಿಶ್ರಾಂತಿ ಪಡೆಯುವ , ನಿದ್ದೆ ಮಾಡುತ್ತಿರೋ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಧಾರವಾಡದಲ್ಲಿ ಓದುವ ಕೆಲವು ವಿದ್ಯಾರ್ಥಿಗಳಿಗೆ ಪಿಜಿ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದು, ಉನ್ನತ ಭವಿಷ್ಯ ಅರಸಿ ಪರೀಕ್ಷೆ ಬರೆಯುತ್ತಿರೋ ವಿದ್ಯಾರ್ಥಿಗಳು ಲೈಬ್ರರಿಯಲ್ಲೇ ಓದಿ, ಅಲ್ಲೇ ಮಲಗಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿಗಳ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇನ್ನು ಕೆಲವು ವಿದ್ಯಾರ್ಥಿಗಳು ಪಿಜೆಗೆ ಹಣ ಕಟ್ಟಲು ಆಗಿಲ್ಲ. ಬಡತನದ ಕಾರಣ ಹಲವು ವಿದ್ಯಾರ್ಥಿಗಳು ಲೈಬ್ರರಿಯಲ್ಲೇ ಅಧ್ಯಯನ ಮಾಡಿ ಅಲ್ಲೇ ಮಲಗುತ್ತಿದ್ದಾರೆ ಎನ್ನಲಾಗಿದೆ.