ಕಾರು ಅಪಘಾತ, ವ್ಯಕ್ತಿ ಸಾವು

ಅಣ್ಣಿಗೇರಿ

ಸೋಮವಾರ ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮರ‍್ಗ ಮಧ್ಯೆ ಬರುವ ಅಣ್ಣಿಗೇರಿ ಹೊರವಲಯದ ಕೊಂಡಿಕೊಪ್ಪ ಕ್ರಾಸ್ ಸಮೀಪ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗದಗ ಹಾತಲಗೇರಿ ನಾಕಾ ನಿವಾಸಿಯಾದ ವಿಠೋಬಾ ಹನುಮಂತಪ್ಪ ಓಂ ಮೃತ ದರ‍್ದೈವಿ. ಕಾರು ಅತಿವೇಗವಾಗಿ ಬಂದ ಕಾರಣ ಅಪಘಾತ ಸಂಭವಿಸಿದೆ. ಒಂದು ಕಾರು ಪಲ್ಟಿಯಾಗಿದ್ದು, ಮತ್ತೊಂದು ಕಾರಿನ ಮುಂದಿನ ಭಾಗ ಸಂಪರ‍್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಜನಸ್ನೇಹಿ ಪೆÇಲೀಸ್ ಠಾಣೆಯ ಪಿಎಸ್‍ಐ ಲಾಲ್ ಸಾಬ್ ಜೂಲಕಟ್ಟಿ, ಎಎಸ್‍ಐ ಪಾಟೀಲ್, ಸಂತೋಷ್ ರಾಮನಗೌಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ