ಭಾರತದಲ್ಲಿ ಮಿತಿಮೀರಿದ ವಾಯುಮಾಲಿನ್ಯ, ಕ್ಷೀಣಿಸಿದ ಜೀವಿತಾವಧಿ

ಭಾರತದಲ್ಲಿ ಮಿತಿಮೀರಿದ ವಾಯುಮಾಲಿನ್ಯ, ಕ್ಷೀಣಿಸಿದ ಜೀವಿತಾವಧಿ
ನವದೆಹಲಿ: ಭಾರತದಲ್ಲಿ ಮಿತಿ ಮೀರಿದ ವಾಯುಮಾಲಿನ್ಯದಿಂದ ಜನರ ಜೀವಿತಾವಧಿಯಲ್ಲಿ 2.5ರಿಂದ 2.9 ವರ್ಷಗಳಷ್ಟು ಕ್ಷೀಣವಾಗಿದೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ವಾಯುಗುಣಮಟ್ಟ ಜೀವನ ಇಂಡೆಕ್ಸ್ ಹೇಳಿದೆ. ಜಾಗತಿಕ ಮಾನದಂಡಕ್ಕಿಂತಲೂ ಏಳು ಪಟ್ಟು ಭಾರತದ ವಾಯು ಮಾಲಿನ್ಯ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿಯೊಂದು ಕ್ಯೂಬಿಕ್ ಮೀಟರ್‍ಗೆ 10 ಮಿಲಿ ಗ್ರಾಂ ಉಸಿರುಕಂಟಕ ಕಣಗಳಿರಬಹುದು.
ಆದರೆ ಭಾರತದಲ್ಲಿ 2019ರಲ್ಲಿ 70 ಮಿಲಿ ಗ್ರಾಂಗಳಿವೆ ಎಂದು ವರದಿ ತಿಳಿಸಿದೆ. ಮಹರಾಷ್ಟ್ರ, ಮಧ್ಯಪ್ರದೇಶದಲ್ಲಿದಲ್ಲಿ ಮಾಲೀನ್ಯ ಹೆಚ್ಚಾಗಿದೆ. ಇದರಿಂದ ಜೀವಿತಾವಧಿ ಕೂಡ ಕ್ಷೀಣವಾಗಿದೆ ಎಂದು ಹೇಳಲಾಗಿದೆ. ವಿಶ್ವದಲ್ಲಿ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನದಲ್ಲಿ ಹೆಚ್ಚು ವಾಯು ಮಾಲಿನ್ಯವಿದೆ. ಒಂದು ವೇಳೆ ಮಾಲೀನ್ಯ ತಗ್ಗಿದರೆ ಜನರ ಜೀವಿತಾವಧಿ 5.6 ವರ್ಷ ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಭಾರತದಲ್ಲಿ 48 ಕೋಟಿ ಜನ ಯೂರೋಪ್ ಮತ್ತು ಉತ್ತರ ಅಮೆರಿಕಾ ಜನರಿಗಿಂತಲೂ ಹೆಚ್ಚು ಮಾಲೀನ್ಯವಾದ ಗಾಳಿ ಸೇವಿಸುತ್ತಾರೆ. 1998ರಿಂದ 2017ರ ನಡುವೆ ವಾಯು ಮಾಲಿನ್ಯ ತೀವ್ರವಾಗಿದೆ. ಉಷ್ಣವಿದ್ಯುತ್ ಉತ್ಪಾದನೆಯಿಂದ ಉಂಟಾಗುವ ಹೊಗೆ, ಬೆಳೆಗಳಿಗೆ ಬೆಂಕಿ ಹಚ್ಚುವುದು, ಇಟ್ಟಿಗೆ ಸುಟುವುದು ಮತ್ತು ಇತರ ಕೈಗಾರಿಕೆಗಳ ಹೊಗೆಯಿಂದ ಗಾಳಿಯ ಗುಣಮಟ್ಟ ಕುಸಿದಿದೆ ಎಂದು ವರದಿ ಉಲ್ಲೇಖಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಿಗಿಂತಲೂ ಹೆಚ್ಚಿನ ಜನ ವಾಯು ಮಾಲೀನ್ಯದಿಂದ ಮೃತ ಪಟ್ಟಿದ್ದಾರೆ ಎಂದು ವರದಿ ಆತಂಕ ವ್ಯಕ್ತ ಪಡಿಸಿದೆ.