ಅಪ್ಪು ಜೊತೆಗಿನ ಕಾಂಪಿಟೇಷನ್.. ಇಬ್ಬರ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ಶಾಕಿಂಗ್ ಕಾಮೆಂಟ್ಸ್ ವೈರಲ್

ಅಪ್ಪು ಜೊತೆಗಿನ ಕಾಂಪಿಟೇಷನ್.. ಇಬ್ಬರ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ಶಾಕಿಂಗ್ ಕಾಮೆಂಟ್ಸ್ ವೈರಲ್

ಸಿನಿಮಾ ಇಂಡಸ್ಟ್ರಿ ಅಂದಮೇಲೆ ಫ್ಯಾನ್ಸ್ ವಾರ್, ಕಾಂಪಿಟೇಷನ್ ಎಲ್ಲ ಮಾಮೂಲಿ. ಕೆಲವೊಮ್ಮೆ ಇಂತಹ ವಿಚಾರಗಳೇ ಸ್ಟಾರ್‌ ನಟರ ನಡುವೆ ದೊಡ್ಡ ಕಂದಕ ಸೃಷ್ಟಿ ಮಾಡಿಬಿಡುತ್ತದವೆ. ಇಂತದ್ದೇ ವಿಚಾರದ ಬಗ್ಗೆ ನಟ ಕಿಚ್ಚ ಸುದೀಪ್ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅಭಿಮಾನಿಗಳು ಅವರನ್ನು ನೆನೆಯದ ದಿನವಿಲ್ಲ. ಇನ್ನು ಆಪ್ತರಂತೂ ಪುನೀತ್ ನೆನಪನ್ನು ಸದಾ ಹಚ್ಚ ಹಸಿರಾಗಿ ಇಟ್ಟುಕೊಳ್ಳುತ್ತಾರೆ. ಪುನೀತ್ ರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಬಾಲ್ಯದಿಂದಲೂ ಆತ್ಮೀಯ ಸ್ನೇಹಿತರು ಎನ್ನುವುದು ಗೊತ್ತೇಯಿದೆ. ಆದರೆ ಚಿತ್ರರಂಗಕ್ಕೆ ಬಂದಮೇಲೆ ಇಬ್ಬರ ನಡುವೆ ಕಾಂಪಿಟೇಶನ್ ಶುರುವಾಗಿ ಒಂದು ಹಂತದಲ್ಲಿ ಅದು ಬೇರೆ ಏನೇನೋ ಆಗಿತ್ತು ಎಂದು ಸುದೀಪ್ ತಿಳಿಸಿದ್ದಾರೆ. ಸದ್ಯ ಕಿಚ್ಚನ ಕಾಮೆಂಟ್ಸ್ ವೈರಲ್ ಆಗಿದೆ.

ಅಪ್ಪು- ಕಿಚ್ಚ ಬಾಲ್ಯ ಸ್ನೇಹಿತರು. ಚಿಕ್ಕಂದಿನಲ್ಲಿ ಇಬ್ಬರೂ ಒಟ್ಟಿಗೆ ತೆಗಿಸಿಕೊಂಡಿದ್ದ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. 'ಪೈಲ್ವಾನ್' ಸಿನಿಮಾ ಕಾರ್ಯಕ್ರಮದಲ್ಲಿ ಅದೇ ಪೋಸ್‌ನ ರೀ ಕ್ರಿಯೇಟ್ ಕೂಡ ಮಾಡಿದ್ದರು. ತಮಿಳಿನ ಇಂಡಿಯಾ ಗ್ಲಿಟ್ಜ್‌ ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅಪ್ಪು ಬಗ್ಗೆ ಮಾತನಾಡಿದ್ದಾರೆ.

ಸುದೀಪ್ ಅವರಿಗೆ ಸಂದರ್ಶನಲ್ಲಿ ಅಪ್ಪು ಜೊತೆಗಿನ ಬಾಂಧವ್ಯದ ಕುರಿತು ಪ್ರಶ್ನೆ ಎದುರಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ "ನಾವಿಬ್ಬರು ಚೈಲ್ಡ್‌ವುಡ್ ಫ್ರೆಂಡ್ಸ್. ನಾವಿಬ್ಬರು ತಬ್ಬಿ ನಿಂತಿರುವ ಫೋಟೊಗಳು ಇದೆ. ಆದರೆ ಆ ನಂತರ ಜೀವನ ಬೇರೆ ಬೇರೆ ದಿಕ್ಕಿಗೆ ಹೊರಳಿತು. ಇಬ್ಬರು ಭೇಟಿ ಮಾಡಲಿಲ್ಲ. ಬೆಳೆಯುವ ಸಮಯದಲ್ಲಿ ಓದುವ ವೇಳೆ ಬೇರೆ ಬೇರೆ ಕಡೆ ಇದ್ದೆವು. ನಂತರ ಸಿನಿಮಾ ಇಂಡಸ್ಟ್ರಿಯಲ್ಲಿ ಭೇಟಿ ಆಗಿದ್ದೆವು. ಅವರು ಬಾಲ್ಯ ನಟ. ಬಹಳ ಅನುಭವ ಇತ್ತು. ಆದರೆ ಹೀರೊ ಆಗಿ ನಾನು ಇಂಡಸ್ಟ್ರಿಗೆ ಮೊದಲು ಬಂದೆ. ನಂತರ ಅವರು ಇಂಡಸ್ಟ್ರಿಗೆ ಬಂದರು"

ಇಂಡಸ್ಟ್ರಿಗೆ ಬಂದಮೇಲೆ ಎಲ್ಲಾ ಚೆನ್ನಾಗಿತ್ತು. ಜೀವನದಲ್ಲಿ ಒಂದು ಹಂತ ಬರುತ್ತದೆ. ಬೆಳೆಯುವ ಹಂತದಲ್ಲಿ ಕಾಂಪಿಟೇಷನ್ ಬರುತ್ತದೆ. ಫ್ಯಾನ್ ವಾರ್ ಒಳಗೆ ಬರುತ್ತದೆ. ಅದು ನಮ್ಮ ಒಳಗೂ ಹೋಗುತ್ತದೆ. ಯಾರ ಸಿನಿಮಾ ದೊಡ್ಡದಾಗಿ ಹಿಟ್ ಆಗುತ್ತದೆ? ಯಾರ ಸಿನಿಮಾ ಏನಾಗುತ್ತದೆ? ಎನ್ನುವ ಒಂದಿಷ್ಟು ವಿಚಾರಗಳು ಬರುತ್ತದೆ. ಅದೆಲ್ಲಾ ಜೀವನದ ಒಂದು ಹಂತ. ಅದು ನಿಜ ಕೂಡ. ನಂತರ ಒಂದಷ್ಟು ವರ್ಷಗಳ ನಂತರ ಇಬ್ಬರು ಇಂಡಸ್ಟ್ರಿಯಲ್ಲಿ ನೆಲೆಗೊಂಡ ಮೇಲೆ ಅವರು ಚೆನ್ನಾಗಿದ್ದಾರೆ, ನಾನು ಚೆನ್ನಾಗಿದ್ದೆ. ಅದು ಆಗುತ್ತೆ. ನಂತರ ಕನೆಕ್ಟ್ ಆದ್ವಿ. ನಂತರ ಎಲ್ಲಾ ಸರಿ ಆಯಿತು.

"ಅಪ್ಪು ಸರ್ ಇಂಡಸ್ಟ್ರಿಗೆ ಒಳ್ಳೆ ಆಸ್ತಿ. ಒಳ್ಳೆ ವ್ಯಕ್ತಿ. ಒಳ್ಳೆಯ ಮನಸ್ಸಿತ್ತು. ಅದಕ್ಕೆ ಅಷ್ಟೆಲ್ಲಾ ಅಭಿಮಾನಿಗಳ ಪ್ರೀತಿ ಎಲ್ಲಾ ಕಡೆ ಸಿಕ್ತು" ಎಂದು ಸುದೀಪ್ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನು 'ವಿಕ್ರಾಂತ್ ರೋಣ' ಸಿನಿಮಾ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಈ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

'ವಿಕ್ರಾಂತ್ ರೋಣ' ನಂತರ ಸುದೀಪ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. 'ಕಬ್ಜ' ಹಾಗೂ 'ಉಸಿರೇ ಉಸಿರೇ' ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ತಮಿಳಿನ ವೆಂಕಟ್ ಪ್ರಭು ನಿರ್ದೇಶನದಲ್ಲಿ ಸುದೀಪ್ ನಟಿಸುತ್ತಾರೆ ಎನ್ನಲಾಗ್ತಿದೆ. 'ವಿಕ್ರಾಂತ್ ರೋಣ' ಸಾರಥಿ ಅನೂಪ್ ಭಂಡಾರಿ ಕೂಡ ಕಿಚ್ಚನಿಗಾಗಿ 2 ಕಥೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಸುದೀಪ್ ಹೊಸ ಸಿನಿಮಾ ಸುದ್ದಿ ಯಾವಾಗ ಸಿಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.