ಕ್ಯಾನ್ಸರ್ ಹೇಗೆ ಹರಡುತ್ತದೆ ಸಂಶೋಧನೆಯಿಂದ ಬೆಳಕಿಗೆ ಬಂತು ಹೊಸ ವಿಚಾರ
ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಕುರಿತಾದ ಸಂಶೋಧನೆಗಳು ಮುಂದುವರೆದಿದೆ.
ಎನ್‌ಎಎಲ್ಸಿಎನ್ ಪ್ರೋಟೀನ್ನಂತಹ ಕೆಲವು ಪ್ರೋಟೀನ್ಗಳ ಚಟುವಟಿಕೆಯನ್ನು ತಡೆಯುವುದು, ಇಲಿಗಳಲ್ಲಿ ಕ್ಯಾನ್ಸರ್ ಕೋಶಗಳ ಮೆಟಾಸ್ಟಾಸಿಸ್ನ್ನು ಪ್ರಚೋದಿಸುತ್ತದೆ ಎಂದು ಸಂಶೋಧಕರು ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಕ್ಯಾನ್ಸರ್ಗೆ ಹೊಸ ಚಿಕಿತ್ಸಾ ವಿಧಾನಗಳನ್ನು ಕಂಡುಹಿಡಿಯುವ ಪ್ರಕ್ರಿಯೆಯೂ ದೀರ್ಘ ಮತ್ತು ಪ್ರಯಾಸಕರವಾಗಿದೆ. ಚರ್ಮದ ಕ್ಯಾನ್ಸರ್ ಕೋಶಗಳನ್ನು ಕೊಲ್ಲಬಲ್ಲ ವಿಕಿರಣಶೀಲ ಜೆಲ್ನ್ನು ವೈದ್ಯರು ರಚಿಸಿದ್ದು, ಮತ್ತೆ ಕೆಲವರು ವಯಾಗ್ರವು ಕ್ಯಾನ್ಸರ್-ವಿರೋಧಿ ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಕ್ಯಾನ್ಸರ್ ಏಕೆ ಮತ್ತು ಹೇಗೆ ಹರಡುತ್ತದೆ?
ಈ ಹೊಸ ಸಂಶೋಧನೆಯು ಕ್ಯಾನ್ಸರ್ ಏಕೆ ಮತ್ತು ಅದು ಹೇಗೆ ಹರಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಇದು ಅನೇಕರಿಗೆ ಹೊಸ ಚಿಕಿತ್ಸಾ ವಿಧಾನಗಳಿಗೆ ದಾರಿ ಮಾಡಿಕೊಡಬಹುದು. ಮೆಟಾಸ್ಟಾಸಿಸ್ ಮೂಲಕ ಕ್ಯಾನ್ಸರ್ ಕೋಶಗಳನ್ನು ಹರಡುವ ಜೊತೆಗೆ, ಆರೋಗ್ಯಕರ ಜೀವಕೋಶಗಳು ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಎನ್‌ಎಎಲ್ಸಿಎನ್ ಪ್ರೋಟೀನ್ ಸಹ ಕಾರಣವಾಗಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಎನ್‌ಎಎಲ್ಸಿಎನ್ ಪ್ರೋಟೀನ್ನ್ನು ತೆಗೆದುಹಾಕಿದಾಗ, ಮೇದೋಜೀರಕ ಗ್ರಂಥಿಯಿಂದ ಆರೋಗ್ಯಕರ ಜೀವಕೋಶಗಳು ಮೂತ್ರಪಿಂಡಕ್ಕೆ ಹರಡುತ್ತದೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದು ಆರೋಗ್ಯಕರ ಮೂತ್ರಪಿಂಡದ ಕೋಶಗಳಾಗಿವೆ ಎಂದು ಕಂಡುಕೊಂಡಿದ್ದಾರೆ. ಈ ಆವಿಷ್ಕಾರಗಳ ಪರಿಣಾಮವಾಗಿ, ಕ್ಯಾನ್ಸರ್ ಹರಡುವ ಪ್ರಮುಖ ಮಾರ್ಗವಾದ ಮೆಟಾಸ್ಟಾಸಿಸ್, ರೋಗಕ್ಕೆ ಸಂಬಂಧಿಸಿದ ಅಸಹಜ ಪ್ರಕ್ರಿಯೆಯಲ್ಲ ಎಂದು ಸಂಶೋಧಕರು ನಂಬುತ್ತಾರೆ.
ಹೊಸ ಚಿಕಿತ್ಸಾ ವಿಧಾನಕ್ಕೆ ದಾರಿ:
ಇದು ವಿಶೇಷವಾಗಿ ಪ್ರಮುಖ ವರದಿಯಾಗಿದ್ದು, ಮೆಟಾಸ್ಟಾಸಿಸ್ ಎಂಬುದು ಕ್ಯಾನ್ಸರ್ ಕೋಶಗಳು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡುವ ಪ್ರಾಥಮಿಕ ಮಾರ್ಗವಾಗಿದೆ. ಆರೋಗ್ಯಕರ ಜೀವಕೋಶಗಳು ಈ ವರ್ಗಾವಣೆ ಪ್ರಕ್ರಿಯೆಯನ್ನು ಸಹ ಬಳಸಿಕೊಳ್ಳುವುದರಿಂದ, ಭವಿಷ್ಯದಲ್ಲಿ ಹೆಚ್ಚಿನ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ಇದು ಅನುವು ಮಾಡಿಕೊಡಬಹುದು. ಕ್ಯಾನ್ಸರ್ ಹೇಗೆ ಹರಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವ ಪ್ರಮುಖ ಭಾಗವಾಗಿದೆ ಎನ್ನಲಾಗುತ್ತಿದೆ.