ಪ್ರಧಾನಿ ನರೇಂದ್ರ ಮೋದಿಯವರ ಯುಎಇ ಪ್ರವಾಸ ರದ್ದು

ಪ್ರಧಾನಿ ನರೇಂದ್ರ ಮೋದಿಯವರ ಯುಎಇ ಪ್ರವಾಸ ರದ್ದು

ನವದೆಹಲಿ : ಒಮಿಕ್ರಾನ್ ಕಳವಳದ ( Omicron Variant ) ನಡುವೆ ಜನವರಿ 6ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ( Prime Minister Narendra Modi) ಅವರ ಯುಎಇ ಮತ್ತು ಕುವೈತ್( UAE and Kuwait) ಭೇಟಿಯನ್ನು ರದ್ದು ಪಡಿಸಲಾಗಿದೆ.

ಸೌತ್ ಬ್ಲಾಕ್ ಮೂಲಗಳ ಪ್ರಕಾರ, ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಭೇಟಿಯನ್ನ ಮರು ನಿಗದಿಪಡಿಸಬೇಕಾಗಿದ್ದು, ಫೆಬ್ರವರಿಯಲ್ಲಿ ನಿಗದಿಯಾಗುವ ಸಾಧ್ಯತೆಯಿದೆ.

ಕೊರೊನಾ ವೈರಸ್ʼನ ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಉಲ್ಬಣಗೊಳ್ಳುತ್ತಿದ್ದು, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಯುಎಸ್ʼನಲ್ಲಿ, ಒಮಿಕ್ರಾನ್ ಈಗ ಪ್ರಬಲ ವೈರಸ್ ಆಗಿದ್ದು, ಯುಕೆಯಲ್ಲಿ ಒಮಿಕ್ರಾನ್ʼನ ವೇಗವಾಗಿ ಹರಡಿರುವುದರಿಂದ ಪ್ರತಿದಿನ ಕೋವಿಡ್-19 ದಾಖಲೆಯ ಪ್ರಕರಣಗಳು ವರದಿಯಾಗ್ತಿವೆ.