ಹಡಗು ಮುಳುಗಲು ಶುರುವಾದ ಮೇಲೆ ಕ್ಯಾಪ್ಟನ್ ಬದಲಾವಣೆ ಮಾಡಿದ್ದಾರೆ: ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ಕಾಂಗ್ರೆಸ್ ನಲ್ಲಿ ಜೊತೆಯಾಗಿ ಹೋಗೋಣ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಅವರು ಒಟ್ಟಿಗೆ ಇದ್ದಾರೆ ಎಂದು ಯಾರು ಹೇಳಿದ್ದು?.
ಮೂರು ತಲೆಮಾರಿಗಾಗುವಷ್ಟು ಮಾಡಿದ್ದೇವೆ ಎಂದು ರಮೇಶ್ ಕುಮಾರ್ ಅವರೇ ಹೇಳಿದ್ದಾರೆ. ಇದಕ್ಕಿಂತ ಹೆಚ್ಚು ಯಾರೂ ಹೇಳಲು ಸಾಧ್ಯವಿಲ್ಲ. ಈ ದೇಶವನ್ನು ಎಷ್ಟು ಹಿಂಡಿ ಹಿಪ್ಪೆ ಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ. ದೇಶದಲ್ಲಿ ಅಶಾಂತಿ ನಿರ್ಮಾಣಕ್ಕೆ, ದೇಶ ಬಡವಾಗಲು ಕಾಂಗ್ರೆಸ್ ಕಾರಣ. ಈಗ ಬೊಬ್ಬೆ ಹೊಡೆದರೆ ಜನ ನಂಬಲ್ಲ ಎಂದು ಟೀಕಿಸಿದರು.