ಸೋಮಣ್ಣ ಹೆಸರನ್ನು ಹಾಳು ಮಾಡುವವರ ಬಗ್ಗೆ ಎಚ್ಚರ ಇರಲಿ: ಪ್ರಿಯಾಕೃಷ್ಣ ವಿರುದ್ಧ ಸೋಮಣ್ಣ ಕಿಡಿ

ಸೋಮಣ್ಣ ಹೆಸರನ್ನು ಹಾಳು ಮಾಡುವವರ ಬಗ್ಗೆ ಎಚ್ಚರ ಇರಲಿ: ಪ್ರಿಯಾಕೃಷ್ಣ ವಿರುದ್ಧ ಸೋಮಣ್ಣ ಕಿಡಿ

ಬೆಂಗಳೂರು: ಸೋಮಣ್ಣ ಹೆಸರನ್ನು ಹಾಳು ಮಾಡುವವರ ಬಗ್ಗೆ ಎಚ್ಚರ ಇರಲಿ ಎಂದು ಪರೋಕ್ಷವಾಗಿ ಮಾಜಿ ಶಾಸಕ ಪ್ರಿಯಾಕೃಷ್ಣ ವಿರುದ್ಧ ಸೋಮಣ್ಣ ಕಿಡಿಕಾರಿದ್ದಾರೆ.

ಯಾವುದೋ ಜಾತಿ ಓಲೈಕೆ, ಹಣದ ಆಮಿಷಕ್ಕೆ ಒಳಗಾಗಬೇಡಿ.

ಆದರೆ ಗೌರವಯುತವಾಗಿ ಕೆಲಸ ಮಾಡುತ್ತಿರುವವರಿಗೆ ಅನ್ಯಾಯ ಮಾಡಬೇಡಿ. ನಾನೇ ರಾಜಕೀಯದಲ್ಲಿ ಅನೇಕ ಏರುಪೇರು ಕಂಡಿದ್ದೇನೆ ಎಂದರು.

ವಿಜಯನಗರ ಬಿಜಿಎಸ್‌ ಮೈದಾನ ಗೌರವ ಕಾಪಾಡುವಂತಹ ಸ್ಥಳ ಹೊಂದಿದೆ. ಆದರೆ ಅಲ್ಲಿ ಪೋಲಿ ಪಟಾಲಂ ತಂದು ರೌಡಿಸಂ ಮಾಡಿದ್ದೀರಲ್ಲಾ? ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ವಾ ಎಂದು ಸೋಮಣ್ಣ ಕಿಡಿಕಾರಿದ್ದಾರೆ. ಮೈದಾನದಲ್ಲಿ ರೌಡಿಗ್ಯಾಂಗ್‌ ಕರೆತಂದು ಗಲಾಟೆ ಮಾಡಿಸಿದ್ದೀರಿ. ನಿಮಗೆ ಮನ: ಸಾಕ್ಷಿ ಅನ್ನೋದು ಇಲ್ವಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇಂತಹ ಕಳ್ಳಕಾಕರು , ಆಯೋಗ್ಯರಿಂದ ಕ್ಷೇತ್ರ ಗಬ್ಬು ಆಗಿ ಬಿಡುತ್ತದೆ ಎಂದು ಮಾಜಿ ಶಾಸಕ ಪ್ರಿಯಾಕೃಷ್ಣ ವಿರುದ್ಧ ಸೋಮಣ್ಣ ಕಿಡಿಕಾರಿದ್ದಾರೆ.