ಇಡೀ ಜಿಂಕೆಯ ದೇಹವನ್ನೇ ಸೆಕೆಂಡ್​ಗಳಲ್ಲಿ ಗುಳುಂ ಸ್ವಾಹ ಮಾಡಿದ ದೈತ್ಯ ಹೆಬ್ಬಾವು: ರೋಚಕ ವಿಡಿಯೋ ವೈರಲ್​!

ಇಡೀ ಜಿಂಕೆಯ ದೇಹವನ್ನೇ ಸೆಕೆಂಡ್​ಗಳಲ್ಲಿ ಗುಳುಂ ಸ್ವಾಹ ಮಾಡಿದ ದೈತ್ಯ ಹೆಬ್ಬಾವು: ರೋಚಕ ವಿಡಿಯೋ ವೈರಲ್​!

ವದೆಹಲಿ: ಹೆಬ್ಬಾವೊಂದು ಇಡೀ ಜಿಂಕೆಯನ್ನು ಕಣ್ಣು ಮಿಟುಕಿಸುವುದರಲ್ಲಿ ಗುಳುಂ ಸ್ವಾಹ ಮಾಡಿದ ವಿಡಿಯೋವನ್ನು ಎಂದಾದರೂ ನೀವು ನೋಡಿದ್ದೀರಾ? ನೋಡಿಲ್ಲವಾದರೆ, ಇತ್ತೀಚೆಗಷ್ಟೇ ವೈರಲ್ ಆದ ವಿಡಿಯೋವೊಂದು ನಿಮಗೆ ಆ ಥ್ರಿಲ್​ ನೀಡಲಿದೆ.

ಬ್ಯೂಟಿಫುಲ್​ ನ್ಯೂ ಪಿಕ್ಸ್​ ಆಯಂಡ್​ ಅನಿಮಲ್​ ಪಿಕ್ಸ್​ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್​ಲೋಡ್​ ಮಾಡಲಾಗಿದೆ.

ದೈತ್ಯ ಹೆಬ್ಬಾವೊಂದು ಸತ್ತ ಜಿಂಕೆಯನ್ನು ಕೇವಲ ಸೆಕೆಂಡ್​ಗಳಲ್ಲಿ ನುಂಗಿರುವ ರೋಚಕ ದೃಶ್ಯ ವಿಡಿಯೋದಲ್ಲಿದೆ.

ಮೊಲ, ಇಲಿಯಂತಹ ಸಣ್ಣ ಪ್ರಾಣಿಗಳನ್ನು ಹಾವುಗಳು ಗುಳುಂ ಸ್ವಾಹ ಮಾಡುವುದು ಸಾಮಾನ್ಯ. ಆದರೆ, ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ನುಂಗುವ ವಿಡಿಯೋಗಳು ಕಾಣಸಿಗುವುದು ತುಂಬಾ ಅಪರೂಪ. ಇದೀಗ ವೈರಲ್​ ಆಗಿರುವ ವಿಡಿಯೋ ನೋಡಿಗರಿಗೆ ರೋಚಕತೆ ಕಟ್ಟಿಕೊಡುವುದಂತೂ ಸತ್ಯವಾಗಿದೆ. ನೆಟ್ಟಿಗರು ಸಹ ವಿಡಿಯೋ ನೋಡಿ ಹುಬ್ಬೇರಿಸಿ ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.

ನಾನು ನಿಜವಾಗಿಯೂ ಹಾವುಗಳನ್ನು ದ್ವೇಷಿಸುತ್ತೇನೆ ಎಂದು ನೆಟ್ಟಿಗನೊಬ್ಬ ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬ ನೆಟ್ಟಿಗ ತುಂಬಾ ಭಯಾನಕವಾಗಿದೆ ಎಂದಿದ್ದಾರೆ. ಆದರೆ, ಕೆಲವು ನೆಟ್ಟಿಗರು ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ರಿವರ್ಸ್​ ವರ್ಷನ್​ನಲ್ಲಿ ಪೋಸ್ಟ್​ ಮಾಡಲಾಗಿದೆ. ಹೆಬ್ಬಾವು ಅಷ್ಟೊಂದು ವೇಗವಾಗಿ ನುಂಗಿಲ್ಲ. ಅದು ರಿವರ್ಸ್​ ವಿಡಿಯೋ ಆಗಿದೆ. ಬೇಕಿದ್ದರೆ, ಹಾವಿನ ಬಡಿಯುವ ಕೈಗಳನ್ನು ಗಮನಿಸಬಹುದು ಎಂದಿದ್ದಾರೆ.

ಏನೇ ಇರಲಿ ಕೇವಲ ಒಂದು ವಾರದ ಹಿಂದಷ್ಟೇ ಪೋಸ್ಟ್​ ಮಾಡಿರುವು ವಿಡಿಯೋ 27 ಸಾವಿರಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಲಕ್ಷಾಂತರ ಜನರು ವೀಕ್ಷಿಸಿ ಹುಬ್ಬೇರಿಸಿದ್ದಾರೆ. (ಏಜೆನ್ಸೀಸ್​)