ರಾಜ್ಯದಲ್ಲಿ ಯುವಕನಿಗೆ ಸಿಎಂ ಸ್ಥಾನ : ದೇವರಗುಡ್ಡ ಕಾರ್ಣಿಕದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು ಗೊತ್ತಾ
ಕಾರಿಪುರ : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಯುವಕನಿಗೆ ದೊರೆಯುವ ಸಾಧ್ಯತೆ ಇದೆ ಎಂಬ ದೇವರಗುಡ್ಡದ ಗೊರವಪ್ಪ ಕಾರ್ಣಿಕದ ಬಗ್ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಯುವಕರಿದ್ದಾರೆ ಮತ್ತು ನಾನು ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಜನರು ಭಾವಿಸಬೇಕಾಗಿಲ್ಲ, ರಾಜ್ಯದಲ್ಲಿ ಯುವಕರಿಗೆ ಅನೇಕ ರಾಜಕೀಯ ಅವಕಾಶಗಳು ದೊರೆಯಲಿವೆ ಎಂದು ಹೇಳಿದ್ದಾರೆ.
ರಾಣೆಬೆನ್ನೂರು ತಕಿ ದೇವರಗುಡ್ಡದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಅಂತಾ ಹೇಳುತ್ತಾ ದೇವರಗುಡ್ಡದ ಕಾರ್ಣಿಕವನ್ನ ಗೊರವಪ್ಪ ನಾಗಪ್ಪ ಉರ್ಮಿ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದರು.