ಮಣ್ಣಲ್ಲಿ ಮಣ್ಣಾದ ಸಿ.ಎಂ. ಬೊಮ್ಮಾಯಿ ಅವರ ಮಾಧ್ಯಮ ಸಲಹೆಗಾರ ಗುರುಲಿಂಗಸ್ವಾಮಿ ಹೋಳಿಮಠ

ಸಿಎಂ ಬಸವರಾಜ ಬೊಮ್ಮಯಿಯವರ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠ ಅವರ ಅಂತ್ಯಕ್ರಿಯೆ ರಾಮದುರ್ಗದ ಹಿಂದೂ ರುದ್ರಭೂಮಿಯಲ್ಲಿ ಜಗದ್ಗುರು ಶಾಂತವೀರ ಮಹಾಸ್ವಾಮಿಜಿಯವರ ಸಾನಿದ್ಯದಲ್ಲಿ ಜರುಗಿತು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿದ ಪಾರ್ಥಿವ ಶರೀರ ರುದ್ರಭೂಮಿ ಬಂದು ತಲುಪಿತು. ಮೆರವಣಿಗೆಯಲ್ಲಿ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಬೆಳಗಾವಿ ಎಸ್. ಪಿ. ಡಾ. ಸಂಜೀವ ಪಾಟೀಲ್, ಡಾ.ಕುಲಗೋಡ, ರಾಮದುರ್ಗ ತಹಸೀಲ್ದಾರ್, ಡಿ ಎಸ್ ಪಿ ಹಟ್ಟಿ, ಸಿ. ಪಿ. ಆಯ್ ಪಟ್ಟಣಶೆಟ್ಟಿ ಸೇರಿದಂತೆ ರಾಜ್ಯದ ನೂರಾರು ಹಿರಿಯ ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು. ಅಷ್ಟೇ ಅಲ್ಲ ಸಾವಿರಾರು ಅವರ ಅಭಿಮಾನಿಗಳು ಹಾಗೂ ಅಪಾರ ಬಂಧು ಬಳಗ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
9 ಲೈವ್ ನ್ಯೂಸ್ ರಾಮದುರ್ಗ