ಮಾತು ಬಾರದ, ಕಿವಿ ಕೇಳದ ಮತದಾರರಿಗೆ ನೆರವು; ಚುನಾವಣೆ ಕಾರ್ಯಕ್ಕೆ ಸಂಜ್ಞೆ ಸಂವಹನಕಾರರು

ಮಾತು ಬಾರದ, ಕಿವಿ ಕೇಳದ ಮತದಾರರಿಗೆ ನೆರವು; ಚುನಾವಣೆ ಕಾರ್ಯಕ್ಕೆ ಸಂಜ್ಞೆ ಸಂವಹನಕಾರರು

ದಾವಣಗೆರೆ: ಮಾತು ಬಾರದ, ಕಿವಿ ಕೇಳದ ಮತದಾರರ ನೆರವಿಗಾಗಿ ಸಂಜ್ಞೆ ಸಂವಹನಕಾರರನ್ನು ಪೋಲ್‌ ಪ್ಯಾನಲ್‌‌ ಸಹಾಯಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗ ಸೂಚಿಸಿದ್ದು, ರಾಜ್ಯ ವಿಧಾನಸಭೆ ಚುನಾವಣೆಯ ಮತಗಟ್ಟೆಗಳಲ್ಲಿ ಸಂಜ್ಞೆ ಸಂವಹನಕಾರರು ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲಾ ಮತಗಟ್ಟೆಯಲ್ಲಿ ಸಂಜ್ಞೆ ಸಂವಹನಕಾರು ಇರಲಾರರು. ಅದಕ್ಕಾಗಿ ಈ ಸಂವಹನಕಾರರ ಮೊಬೈಲ್‌‌ ಸಂಖ್ಯೆ ಎಲ್ಲಾ ಬೂತ್‌ಗಳಲ್ಲಿ ಇರಬೇಕು. ಈ ಸಂಖ್ಯೆಗೆ ವಿಡಿಯೊ ಕಾಲ್‌ ಮಾಡಿ ಸಂಶಯ ನಿವಾರಿಸಿಕೊಳ್ಳಬಹುದು.