ಚೀನಾದೊಂದಿಗಿನ ಸಂಬಂಧಗಳ ಸುವರ್ಣ ಯುಗ ಮುಕ್ತಾಯ ಎಂದ ಬ್ರಿಟನ್‌ ಪ್ರಧಾನಿ

ಚೀನಾದೊಂದಿಗಿನ ಸಂಬಂಧಗಳ ಸುವರ್ಣ ಯುಗ ಮುಕ್ತಾಯ ಎಂದ ಬ್ರಿಟನ್‌ ಪ್ರಧಾನಿ

ಲಂಡನ್‌: ಇಂಗ್ಲೆಂಡ್‌‌ನ ಮೌಲ್ಯಗಳು & ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲನ್ನು ಒಡ್ಡಿದೆ. ಚೀನಾದೊಂದಿಗಿನ ಸಂಬಂಧಗಳ ಸುವರ್ಣ ಯುಗ ಮುಕ್ತಾಯವಾಗಿದೆ ಎಂದು ಬ್ರಿಟನ್‌‌ ಪ್ರಧಾನಿ ರಿಷಿ ಸುನಕ್‌‌‌‌ ಎಚ್ಚರಿಸಿದ್ದಾರೆ. ವಿಶ್ವ ವ್ಯವಹಾರಗಳಲ್ಲಿ ಜಾಗತಿಕ ಆರ್ಥಿಕ ಸ್ಥಿರತೆ ಅಥವಾ ಹವಾಮಾನ ಬದಲಾವಣೆಯಂತ ಸಮಸ್ಯೆಗಳಿಗೆ ಚೀನಾದ ಪ್ರಾಮುಖ್ಯತೆಯನ್ನು ನಾವು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ಜಪಾನ್‌‌ & ಇತರ ಅನೇಕರು ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ