ಜೆಡಿಎಸ್ ಕಾರ್ಯಲಯ ಉದ್ಘಾಟನೆ | Annigeri |
ಧಾರವಾಡ ಜಿಲ್ಲೆಯ ಅಣಿಗೇರಿ ನಗರದ ಬೆಂತುರ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಸ ಪಕ್ಷದ ಕಾರ್ಯಾಲಯವನ್ನು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು ಬರುವ ಪುರಸಭೆಯ ಚುನಾವಣೆಯಲ್ಲಿ 23 ವಾರ್ಡ್ ಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು. ಹಾಗೂ ಬಾಕಿ ಉಳಿದ ರೈತರ ಬೆಳೆ ವಿಮೆಯ ಹಣವನ್ನು ಆದಷ್ಟು ಬೇಗನೆ ರೈತರ ಖಾತೆಗಳಿಗೆ ಜಮಾ ಮಾಡಬೇಕು ಇಲ್ಲದಿದ್ದಲ್ಲಿ ಬರುವ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ. ಬಿ. ಗಂಗಾಧರ್ ಮಠ, ನಗರ ಘಟಕದ ಅಧ್ಯಕ್ಷರಾದ ಭಗವಂತಪ್ಪ ಪುಟ್ಟಣ್ಣವರ. ತಾಲೂಕು ಘಟಕದ ಅಧ್ಯಕ್ಷರಾದ ಪ್ರದೀಪ ಲೇಕನಗೌಡರ, ಶಿವಶಂಕರ್ ಕಲ್ಲೂರ್, ಹಸನ್ ಸಾಬ್ ಗೂಡು ನಾಯ್ಕರ್, ದಾವಲ್ ಸಾಬ್ ದರವನ, ನಾರಾಯಣ ಮಾಡಳ್ಳಿ, ಲಕ್ಷ್ಮಣ ಬೆಂತುರ್, ಬಸಪ್ಪ ಬೀರನ್ನವರ್,ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಪಕ್ಷದ ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.