ಕೇಂದ್ರ ಸರ್ಕಾರ ಎನ್ನದರೂ ಲೋಕ ಕಲ್ಯಾಣ ಮಾಡ್ಲಿ. ಶಾಸಕ ಖಂಡ್ರೆ

ಕೇಂದ್ರ ಸರ್ಕಾರ ತನ್ನ ದುರಾವರ್ತನೆಯನ್ನು ಬಿಟ್ಟು ರೈತ ಪರ,ಜನ ಪರ,ಲೋಕ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಬಿ ಖಂಡ್ರೆ ಒತ್ತಾಯಿಸಿದ್ರು. ಕೇಂದ್ರ ಬಿಜೆಪಿ ಸರ್ಕಾರ್ ರೈತರ ಹೋರಾಟಕ್ಕೆ ಮಣಿದು 3 ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿದೆ ಇದು ನಮ್ಮ ದೇಶದ ರೈತರಿಗೆ ಸಿಕ್ಕ ಜಯ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ. ರೈತರ ಹೋರಾಟಕ್ಕೆ ಬೆಂಬಲ ನೀಡಿ ರೈತರ ಪರ ನಿಂತಿರುವ ನಮ್ಮ ಪಕ್ಷ ಹಾಗೂ ನಮ್ಮ ನಾಯಕರಾದ ರಾಹುಲ ಗಾಂಧಿ ಅವರಿಗೆ ನಾನು ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.