ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಂಚಾರಕ್ಕೆ ಸಿದ್ದವಾದ ರ್‍ಯಾಪಿಡ್ ರಸ್ತೆ

ಬೆಂಗಳೂರಿನ ; ರಸ್ತೆಗೆ ಬಿಬಿಎಂಪಿ ಆಧುನಿಕ ಟಚ್ ಕೊಟ್ಟಿದೆ. ವೈಟ್ ಟಾಪಿಂಗ್ ಬದಲು ರ್‍ಯಾಪಿಡ್ ರಸ್ತೆ ನಿರ್ಮಾಣ ಮಾಡಲಾಗಿದೆ. ಸಿ.ವಿ.ರಾಮನ್ನಗರ ಕ್ಷೇತ್ರದ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಲಾದ ರ್‍ಯಾಪಿಡ್ ರಸ್ತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟಿಸಿದ್ದಾರೆ. ಈಗಾಗಲೇ ಅಮೆರಿಕಾದಲ್ಲಿ ರ್‍ಯಾಪಿಡ್ ರಸ್ತೆ ಯಶಸ್ವಿಯಾಗಿದೆ. ಇನ್ನೂ ರ್‍ಯಾಪಿಡ್ ರಸ್ತೆ (ಫ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್ಮೆಂಟ್) ಫ್ರೀಕಾಸ್ಟ್ ಪ್ಯಾನೆಲ್ ನಿಂದ ನಿರ್ಮಿಸಲಾಗುತ್ತದೆ