ಚಳಿಗಾಲದಲ್ಲಿ ಮೂಗು ಸೋರುವಿಕೆ, ಕಟ್ಟಿದ ಮೂಗಿನಿಂದ ಸುಲಭ ಪರಿಹಾರ
ಶೀತ ಮತ್ತು ಜ್ವರವಿದ್ದಾಗ ಬೆಚ್ಚಗಿನ ನೀರನ್ನೇ ಕುಡಿಯಿರಿ. ಶುಂಠಿ ಮತ್ತು ಗ್ರೀನ್ ಟೀ ಕೂಡ ಮೂಗು ಸೋರುವಿಕೆ & ಗಂಟಲು ನೋವಿಗೆ ಪರಿಹಾರ ನೀಡುತ್ತದೆ. ಉರಿಯೂತ ಕೂಡ ನಿವಾರಣೆಯಾಗುತ್ತದೆ. ಕಫವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ಬಿಸಿ ಹಬೆಯನ್ನು ತೆಗೆದುಕೊಂಡರೆ ಅದು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಬಿಸಿ ನೀರಿನ ಪ್ಯಾಕ್ ಅನ್ನು ಮೂಗಿನ ಮೇಲಿಟ್ಟು ಶಾಖ ಕೊಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಮೂಗು ಕಟ್ಟಿಕೊಳ್ಳುವುದಿಲ್ಲ, ನೀವು ಸರಾಗವಾಗಿ ಉಸಿರಾಡಬಹುದು.