ಏರಿದ ಚಿನ್ನ, ಇಳಿದ ಬೆಳ್ಳಿ

ಏರಿದ ಚಿನ್ನ, ಇಳಿದ ಬೆಳ್ಳಿ

ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಹಿಂದಿನ ದಿನ ಕುಸಿತ ಕಂಡಿದ್ದ ಚಿನ್ನದ ದರ ಇಂದು ಏರಿಕೆಯಾದರೆ, ಬೆಳ್ಳಿ ದರ ಕುಸಿತ ಕಂಡಿತು. ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 200 ರೂ. ಏರಿಕೆಯಾಗಿ 49,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 220 ರೂ. ಹೆಚ್ಚಳವಾಗಿ 54,000 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂ. ಇಳಿಕೆಯಾಗಿ 65,500 ರೂಪಾಯಿ ಆಗಿದೆ.