ಜನಾರ್ದನ ರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ? ಕಾಂಗ್ರೆಸ್‌ ಟ್ವೀಟ್‌

ಜನಾರ್ದನ ರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ? ಕಾಂಗ್ರೆಸ್‌ ಟ್ವೀಟ್‌

ಬೆಂಗಳೂರು: ಬಿಜೆಪಿಯವರೇ ನನ್ನ ಬೆನ್ನಿಗೆ ಚೂರು ಹಾಕಿದರು ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಕುಟುಕಿದೆ.

ಗೆಳೆಯನನ್ನು ಬಿಟ್ಟಿರುವ ಶ್ರೀರಾಮುಲು ವಿರುದ್ಧವೇ, ಋಣ ಮರೆತಿರುವ ಬಿ.ಎಸ್‌.

ಯಡಿಯೂರಪ್ಪ ವಿರುದ್ಧವೇ, ಆಪರೇಷನ್‌ ಕಮಲ ಎಂಬ ಕೊಳಕು ರಾಜಕೀಯಕ್ಕೆ ನಾಂದಿ ಹಾಡಿದವರನ್ನು ತುಳಿದು ಹಾಕಿದ ಬಿಜೆಪಿ ಕರ್ನಾಟಕ ವಿರುದ್ಧವೇ ಎಂದು ಪ್ರಶ್ನಿಸಿದೆ.

ರೆಡ್ಡಿ ಬಳಸಿ ಸಿಎಂ ಆದವರೇ ಈಗ ಅತಂತ್ರರಾಗಿದ್ದಾರೆ. ರೆಡ್ಡಿಯವರಿಗೆ ನೆರವು ನೀಡಲು ಸಾಧ್ಯವೇ ಬಸನಗೌಡ ಪಾಟೀಲರೇ. ಆಪರೇಷನ್‌ ಮಾಡಿಸಿದವರು, ಆಪರೇಷನ್‌ ಮಾಡಿದವರು ಇಬ್ಬರನ್ನೂ ಬಿಜೆಪಿ ಕೆಡವಿ ಹಾಕಿದೆ. ಆಪರೇಷನ್‌ ಆದವರನ್ನೂ ಕೆಡವಲಿದೆ. ಬಿಜೆಪಿ ಎಂದರೆ ಭಸ್ಮಾಸುರ ಇದ್ದಂತೆ. ಯಾರ ತಲೆ ಮೇಲೆ ಕೈ ಬಿದ್ದರೂ ಅವರು ಭಸ್ಮವಾಗುತ್ತಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ.