ಹಾನಗಲ್, ಸಿಂದಗಿಯಲ್ಲಿ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ

ಹಾನಗಲ್, ಸಿಂದಗಿಯಲ್ಲಿ ಉಪಚುನಾವಣೆಯಲ್ಲಿ ಗೆಲ್ಲುತ್ತೇವೆ. ಆದರೆ ಲೀಡ್ ಬಗ್ಗೆ ಹೇಳಲ್ಲ ನಾಳೆ ಹೇಳುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ನಾಡಹಬ್ಬ ದಸರಾ ಆಯವ್ಯಯ ಮಂಡಿಸುವ ನಿಮಿತ್ತ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 2023ರ ಚುನಾವಣೆ ಎಲ್ಲಾ ಕ್ಷೇತ್ರಗಳಲ್ಲಿ ಹೇಗೆ ನಡೆಯುತ್ತದೋ ಅದೇ ರೀತಿ ನಮ್ಮ ಕ್ಷೇತ್ರದಲ್ಲೂ ನಡೆಯುತ್ತದೆ. ನಾವು 17 ಜನ ವಿಶೇಷ ಅಲ್ಲ. ಈಗ ನಡೆದ ಉಪಚುನಾವಣೆ ವಿಶೇಷ. ಅಂದು ನಡೆಯುವುದು ಸಾರ್ವತ್ರಿಕ ಚುನಾವಣೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಮ್ಮನ್ನು ಯಾರು ಸೋಲಿಸಲು ಆಗಲ್ಲ, ಗೆಲ್ಲಿಸುವುದು ಇಲ್ಲ ಎಂದು ಹೇಳಿದರು.